ವಿಜೃಂಭಣೆಯ ಸಿದ್ದಪ್ಪಜ್ಜನ ರಥೋತ್ಸವ, ಓಂ ನಮಃ ಶಿವಾಯ, ಭಕ್ತ ಸಮೂಹದ ಹಷೋದ್ಘಾರ

IMG_20231220_183309_214-1.jpg
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಅಧ್ಯಾಪಕನಗರದಲ್ಲಿರುವ ಶ್ರೀ ಸಿದ್ದಪ್ಪಜ್ಜನವರ 164ನೇ ಜಯಂತಿ ಅಂಗವಾಗಿ ಬುಧವಾರ ಮಹಾ ರಥೋತ್ಸವ ಭಕ್ತ ಸಮೂಹದ ಹಷೋರ್ದ್ಘಾರಗಳ ಮಧ್ಯೆ ವಿಜೃಂಭಣೆಯಿಂದ ನಡೆಯಿತು.

ಸಂಜೆ ಗೋಧೂಳಿ ಸಮಯದಲ್ಲಿ ಅಲಂಕೃತ ರಥವನ್ನು ಪೂಜೆ ಮಾಡಿದ ನಂತರ ಸಾವಿರಾರು ಜನರು ಭಕ್ತಿಯಿಂದ ತೇರು ಎಳೆದರು. ರಥ ಎಳೆಯುತ್ತಿದ್ದಂತೆ ಭಕ್ತರು ಓಂ ನಮಃ ಶಿವಾಯ, ಹರ್ಹರ್ ಮಹಾದೇವ ಘೋಷಣೆಗಳನ್ನು ಮೊಳಗಿಸಿದರು.

ಅನೇಕ ಭಕ್ತರು ಬಾಳೆಹಣ್ಣು, ಉತ್ತತ್ತಿ, ಲಿಂಬೆಹಣ್ಣು ಎಸೆದು ಭಕ್ತಿ ಸರ್ಮಪಿಸಿದರು.

ಬೆಳಗ್ಗೆ ಸಿದ್ದಪ್ಪಜ್ಜನ ಮಠದಲ್ಲಿ ಅಭಿಷೇಕ ಹಾಗೂ ತೊಟ್ಟಿಲೋತ್ಸವ ನಡೆಯಿತು. ಮಧ್ಯಾಹ್ನ ವಿವಿಧ ವಾದ್ಯಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಹಾಗೂ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net