ಗೋಪನಕೊಪ್ಪದಲ್ಲಿ ಸಿದ್ದಪ್ಪಜ್ಜನ ಜಾತ್ರೆ

Published on

ಹುಬ್ಬಳ್ಳಿ: ಇಲ್ಲಿಯ ಗೋಪನಕೊಪ್ಪ ಶ್ರೀ ಸದ್ಗುರು ಸಿದ್ದಪ್ಪಜ್ಜನವರ ಮಠದಲ್ಲಿ ಏ. 26ರಿಂದ ಶ್ರೀ ಸದ್ಗುರು ಸಿದ್ದಪ್ಪಜ್ಜನವರ ತೃತೀಯ ವರ್ಷದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿದೆ.

ನಿತ್ಯ ಸಂಜೆ 7ಕ್ಕೆ ಸಿದ್ದಪ್ಪಜ್ಜನವರ ಜೀವನ ಚರಿತ್ರೆ ಕುರಿತು ಪ್ರವಚನ ನಡೆಯಲಿದೆ. ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಪ್ರವಚನ ನೀಡುವರು. ರಾತ್ರಿ 9ಕ್ಕೆ ಮಹಾಪ್ರಸಾದ ನಡೆಯಲಿದೆ. ಏ. 30ರಂದು ಬೆಳಗ್ಗೆ 5.30ಕ್ಕೆ ರುದ್ರಾಭಿಷೇಕ, 9ಕ್ಕೆ ವಾದ್ಯಮೇಳದೊಂದಿಗೆ ಎತ್ತಿನ ಮೆರವಣಿಗೆ, ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ಮಹಾಪ್ರಸಾದ ನಡೆಯಲಿದೆ.

ಸಂಜೆ 5ಕ್ಕೆ ರಥೋತ್ಸವ ಜರುಗಲಿದ್ದು, ಕುಂದಗೋಳದ ಶ್ರೀ ಅಭಿನವ ಬಸವಣ್ಣಜ್ಜನವರು ಚಾಲನೆ ನೀಡುವರು. ರಾತ್ರಿ 8ಕ್ಕೆ ಸಂಗೀತ, ಹಾಸ್ಯ ಮತ್ತು ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ. ಮೇ 1ರಂದು ಕಡುಬಿನ ಕಾಳಗ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net