

ಮಸ್ಕಿ: ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ರಡ್ಡಿ ಸಮುದಾಯದ ಪ್ರಮುಖರಾಗಿರುವ ಸಿದ್ದಣ್ಣ ಹೂವಿನಬಾವಿ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಮುಂಚೆ ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದ್ದೆ. ಪಕ್ಷದ ಜಿಲ್ಲಾ ಮಟ್ಟದ ಮುಖಂಡರು ಮತ್ತು ಶಾಸಕರು ಕೆಲ ಭರವಸೆ ನೀಡಿದ್ದರಿಂದ ರಾಜೀನಾಮೆ ನೀಡಿರಲಿಲ್ಲ. ಪಕ್ಷದಲ್ಲಿನ ವಾತಾವರಣದಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.
ನಾನು ಮೊದಲಿನಿಂದಲೂ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ. ಆದರೆ, ಈಗಿನ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ. ಹಾಗಾಗಿ ಪಕ್ಷ ತೊರೆದಿರುವೆ ಎಂದು ಸಿದ್ದಣ್ಣ ಹೂವಿನಬಾವಿ ತಿಳಿಸಿದರು. ತಾಪಂ ಮಾಜಿ ಸದಸ್ಯ ಮಲ್ಲಣ್ಣ ಅಮೀನಗಡ, ವಿಜಯ ಹಳೇಕೋಟೆ ಇದ್ದರು.