ಸಿದ್ದಣ್ಣ ಬಂಡಿಗೆ ನಿಗಮ-ಮಂಡಳಿ ಸ್ಥಾನಕ್ಕೆ ಆಗ್ರಹ

25 GJD
ರೋಣ ಪಟ್ಟಣದ ಶಾಸಕರ ಕಚೇರಿಯಲ್ಲಿ ಸಿದ್ದಣ್ಣ ಬಂಡಿ ಅವರ ಅಭಿಮಾನಿ ಬಳಗದಿಂದ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಚಂಬಣ್ಣ ಚವಡಿ, ಸುರೇಶ ಶೆಟ್ಟರ್, ಸುಭಾನಸಾಬ್ ಆರಗಿದ್ದಿ, ಮುತ್ತಣ್ಣ ಮ್ಯಾಗೇರಿ ಇದ್ದರು.
Published on

ಗಜೇಂದ್ರಗಡ: ಸಿದ್ದಣ್ಣ ಬಂಡಿ ಅವರನ್ನು ನಿಗಮ- ಮಂಡಳಿಗೆ ನೇಮಕ ಮಾಡಲು ಹೈಕಮಾಂಡ್‌ಗೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಸಿದ್ದಣ್ಣ ಬಂಡಿ ಅಭಿಮಾನಿ ಬಳಗ, ಜೈಮಾರುತಿ ಹಮಾಲರ ಸಂಘ ಹಾಗೂ ವಿವಿಧ ಗ್ರಾಮಗಳ ಜನರು ಗುರುವಾರ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡ ಪ್ರಭು ಚವಡಿ ಮಾತನಾಡಿ, ಸಿದ್ದಣ್ಣ ಬಂಡಿ ರೋಣ ಮತಕ್ಷೇತ್ರದಲ್ಲಿ ಚಿರಪರಿಚಿತರು. ಕ್ಷೇತ್ರದ ಜನರ ನಾಡಿಮಿಡಿತ ಹಾಗೂ ಕ್ಷೇತ್ರದ ಜನರಿಗೆ ಸಹಾಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದಾರೆ. ಜಿ.ಎಸ್.ಪಾಟೀಲರು ಅಧಿಕ ಮತಗಳ ಅಂತರದಲ್ಲಿ ಗೆಲ್ಲಲು ಶ್ರಮಿಸಿದವರಲ್ಲಿ ಸಿದ್ದಣ್ಣ ಕೂಡಾ ಒಬ್ಬರು ಎಂದರು.

ಮನವಿ ಸ್ವೀಕರಿಸಿ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ನನ್ನ ಗೆಲುವಿಗೆ ಕಾರಣರಾದವರಲ್ಲಿ ಸಿದ್ದಣ್ಣ ಬಂಡಿ ಮುಂಚೂಣಿಯಲ್ಲಿದ್ದಾರೆ. ಅವರ ಪರವಾಗಿ ವರಿಷ್ಠರಲ್ಲಿ ಮಾತನಾಡುವೆ ಎಂದು ಭರವಸೆ ನೀಡಿದರು.

ಚಂಬಣ್ಣ ಚವಡಿ, ಸುರೇಶ ಶೆಟ್ಟರ, ಸುಭಾನಸಾಬ್ ಆರಗಿದ್ದಿ, ಮುತ್ತಣ್ಣ ಮ್ಯಾಗೇರಿ, ಶಶಿಧರ ವಕ್ಕಲರ, ಅಪ್ಪು ಮತ್ತಿಕಟ್ಟಿ, ಶ್ರೀಕಾಂತ ಅವಧೂತ, ಬಸವರಾಜ ಚನ್ನಿ, ನಾಗಯ್ಯ ಗೊಂಗಡಶೆಟ್ಟಿಮಠ, ಎಚ್.ಎಸ್. ಸೋಂಪುರ, ಎ.ಡಿ. ಕೋಲಕಾರ, ಬಸವರಾಜ ರೇವಡಿ, ಜಗದೀಶ ಹೊಸಳ್ಳಿ, ರಾಕೇಶ ಮಾರನಬಸರಿ, ಸುರೇಶಗೌಡ ಪಾಟೀಲ, ವಿಜಯಕುಮಾರ ಜಾಧವ, ಶರೀಪಸಾಬ್ ಸೌದಾಗರ, ಶ್ರೀಕಾಂತ ತಾಳಿಕೋಟಿ, ತುಳಸಪ್ಪ ಸುಳ್ಳದ ರಾಜೇಶ್ವರಿ ಕಾಲವಾಡಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net