ಬಿಜ್ಜೂರ್​ಗೆ ಸಂಗಮ ಸಿರಿ ಪ್ರಶಸ್ತಿ

bijjur
Published on

ಹುಬ್ಬಳ್ಳಿ: ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ ಈ ಬಾರಿಯ ಸಂಗಮ ಸಿರಿ ಪ್ರಶಸ್ತಿಯನ್ನು ವಚನ ರಚನೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ್ ಗ್ರಾಮದ ಸಿದ್ದನಗೌಡ ಬಿಜ್ಜೂರ ಅವರು ರಚಿಸಿದ ಮೃದು ವಚನ ಆಧುನಿಕ ವಚನ ಸಂಕಲನಕ್ಕೆ ನೀಡಲಾಗಿದೆ.

ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ.ಗೌಡಪ್ಪಗೊಳ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಪ್ರಶಸ್ತಿಯನ್ನು ನವೆಂಬರ್​ನಲ್ಲಿ ಪ್ರದಾನ ಮಾಡಲಾಗುವುದು.

ಸಿದ್ದನಗೌಡ ಬಿಜ್ಜೂರ್ ಮುದ್ದೇಬಿಹಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಮಕ್ಕಳ ಸಾಹಿತಿಯಾಗಿ ಗುರುತಿಸಿಕೊಂಡಿರುವ ಅವರು ವಚನ ಸಾಹಿತ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net