ಸಿದ್ಧಲಿಂಗೇಶ್ವರ ಜಾತ್ರೋತ್ಸವ ಆರಂಭ

27Mamadapur1
Published on

ಸಂಗಮೇಶ ಅಂಗಡಿ ಮಮದಾಪುರ

ಗೋಕಾಕ ತಾಲೂಕಿನ ನಬಾಪುರ (ಖನಗಾಂವ) ಗ್ರಾಮದಲ್ಲಿ ಏ.28ರಿಂದ ಮೇ 1ರ ವರೆಗೆ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ.

ಏ.28ರಂದು ಬೆಳಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ. ಬೆಳಗ್ಗೆ 10ಕ್ಕೆ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ ಹಾಗೂ ಸಾಮೂಹಿಕ ವಿವಾಹ ಜರುಗಲಿವೆ. ಸಂಜೆ 7ಕ್ಕೆ ಅಂಕಲಗಿ ಅಮರಸಿದ್ದೇಶ್ವರ ಸ್ವಾಮೀಜಿ ಪ್ರವಚನವಿದೆ.

ಏ.29ರಂದು ಓಟ ಹಾಗೂ ಸೈಕಲ್​ ಶರ್ಯತ್ತು ಆಯೋಜಿಸಿದ್ದು, ವಿಜೇತರಿಗೆ ಈಶ್ವರ ಲಿಂಗೇಶ್ವರ ಟ್ರಸ್ಟ್​ ಕಮಿಟಿ ಬಹುಮಾನ ವಿತರಿಸಲಿದೆ. ಮಧ್ಯಾಹ್ನ 3ಕ್ಕೆ ಮಹಾರಥೋತ್ಸವ, ಸಂಜೆ 5ಕ್ಕೆ ಹನುಮಾನ ಹೊಂಡಕ್ಕೆ ಪೂಜೆ, ಸಂಜೆ ಸಂಗೀತ ಕಾರ್ಯಕ್ರಮವಿದೆ.

ಏ.30ರಂದು ಬೆಳಗ್ಗೆ 8ಕ್ಕೆ ವಿಶ್ವಗುರು ಬಸವಣ್ಣನ ಜಯಂತಿ ಆಚರಣೆ. ರಾತ್ರಿ 9ರಿಂದ ಅಶ್ವಿನಿ ಮೆಲೋಡೀಸ್​ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ. ಮೇ 1ರಂದು ಬೆಳಗ್ಗೆ 9ಗಂಟೆಗೆ ಕಳಸಾರೋಹಣ ಹಾಗೂ ಮಾರುತಿ ದೇವರ ಪಲ್ಲಕ್ಕಿಗಳ ಗದ್ದಿಗೊಳಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.

ಪ್ರತಿ ವರ್ಷ ಶ್ರೀ ಸಿದ್ಧಂಗೇಶ್ವರ ದೇವರ ಜಾತ್ರೆಯನ್ನು ಐದು ದಿನಗಳವರೆಗೆ ಗ್ರಾಮಸ್ಥರು ಅದ್ದೂರಿಯಾಗಿ ಆಚರಿಸುತ್ತ ಬರುತ್ತಿದ್ದಾರೆ. ಬಾಳಯ್ಯ ಮಠಪತಿ ಕುಟುಂಬಸ್ಥರು ದೇವಸ್ಥಾನದ ಪೂಜೆ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಶರಣರ ಸಮಾಗಮ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಗದಗ&ಡಂಬಳ ತೋಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ, ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಗೋಕಾಕ ಶೂನ್ಯ ಸಂಪಾದನಾ ಮಠದ ಮುರುರಾಜೇಂದ್ರ ಸ್ವಾಮೀಜಿ, ಹಣಬರಟ್ಟಿ ಕೆಳದಿ ಹಿರೇಮಠದ ಬಸವಲಿಂಗ ಪಟ್ಟದದೇವರು, ಅಂಕಲಗಿ ಕುಂದರಗಿ ಅಡವಿ ಸಿದ್ದೇಶ್ವರ ಮಠದ ಅಮರ ಸಿದ್ದೇಶ್ವರ ಸ್ವಾಮೀಜಿ, ಮರಡಿಮಠ ಕಾಡಸಿದ್ದೇಶ್ವರ ಮಠದ ಡಾ.ಪವಾಡೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸವರು.

ಗಣ್ಯರ ಉಪಸ್ಥಿತಿ: ಶಾಸಕ ರಮೇಶ ಜಾರಕಿಹೊಳಿ ಅಧ್ಯತೆ ವಹಿಸುವರು. ಬಸನಗೌಡ ಪಾಟೀಲ ಯತ್ನಾಳ್​ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಸಂಸದ ಜಗದೀಶ ಶೆಟ್ಟರ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಯುವ ಧುರೀಣ ಡಾ. ಮಹಾಂತೇಶ ಕಡಾಡಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net