

ಮೂಡಲಗಿ: ಹಲವಾರು ಮಠಗಳಿಂದ ಕೂಡಿರುವ ಪುಣ್ಯೇತ್ರ ಮೂಡಲಗಿ. ಅದರಲ್ಲಿ ಹುಣಶ್ಯಾಳ ಪಿಜಿಯ ಸಿದ್ದಲಿಂಗ ಕೈವಲ್ಯಾಶ್ರಮವೂ ಒಂದು. 2025ರ ಜ.1ರಿಂದ 3ರ ವರೆಗೆ ಶ್ರೀಮಠದಲ್ಲಿ ಸಿದ್ಧಲಿಂಗ ಜಾತ್ರೆ ನಿಮಿತ್ತ 26ನೇ ಸತ್ಸಂಗ ಸಂಭ್ರಮ ಹಾಗೂ ಸಿದ್ದಲಿಂಗೇಶ್ವರರ ತೊಟ್ಟಿಲೋತ್ಸವ, ಕುಂಭೋತ್ಸವ, ಮುತೆದೆಯರ ಉಡಿ ತುಂಬುವುದು, ತುಲಾಭಾರ, ಕಿರೀಟಪೂಜೆ, ತೂಗುಯ್ಯಾಲೆ, ರಥೋತ್ಸವ ಜರುಗಲಿದೆ.
ನಿಜಗುಣದೇವ ಸ್ವಾಮೀಜಿ ಪರಿಚಯ: ಅಥಣಿ ತಾಲೂಕಿನ ನಂದೇಶ್ವರ ಗ್ರಾಮದ ಮಲ್ಲಿಕಾರ್ಜುನ ಮತ್ತು ಗಂಗಮ್ಮ ಪುತ್ರರಾಗಿ 1961ರ ನ.18ರಂದು ನಿಜಗುಣದೇವರು ಜನಿಸಿದರು. ಬಾಲ್ಯದಲ್ಲೇ ಆಧ್ಯಾತ್ಮಿಕತೆಯಲ್ಲಿ ಒಲವು ಬೆಳೆಸಿಕೊಂಡರು. ಬೆಲಹೊಂಗಲದ ಮಹಾದೇವಾನಂದ ಸರಸ್ವತಿ ಸ್ವಾಮೀಜಿ ಆಶ್ರಯದಲ್ಲಿ ಸಂಸತ ಶಾಸ್ತ್ರ ಅಧ್ಯಯನ ಮಾಡಿದರು. ಇಂಚಲದ ಜಗದ್ಗುರು ಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪ್ರವಚನಪಟುವಾದರು. 1995ರಲ್ಲಿ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮಕ್ಕೆ ಪ್ರವಚನಕ್ಕಾಗಮಿಸಿ ಭಕ್ತರ ಒತ್ತಾಸೆಯಿಂದ ಸಣ್ಣ ಕುಟೀರ ಕಟ್ಟಿಕೊಂಡು ಆಧ್ಯಾತ್ಮಿಕ ಬದುಕು ಪ್ರಾರಂಭಿಸಿದರು.
ಕ್ಷೇತ್ರದ ಶಾಸಕರು, ಸಚಿವರು ಸಹಕಾರದಿಂದ ರಂಗಮಂದಿರ, ಯಾತ್ರಾ ನಿವಾಸ, ಸಮುದಾಯ ಭವನ ಮತ್ತು ಶಾಲೆ ಪ್ರಾರಂಭಿಸಿದ್ದಾರೆ. ಪ್ರಸ್ತುತ ಹುಣಶ್ಯಾಳ ಪಿ.ಜಿ ಅಪಾರ ಭಕ್ತರನ್ನು ಸೆಳೆಯುತ್ತಿದೆ. ಅದಕ್ಕೆ ಎಲ್ಲರನ್ನು ಗೌರವಿಸುವ ನಿಜಗುಣದೇವ ಸ್ವಾಮೀಜಿ ಮನೋಭಾವವೇ ಕಾರಣ. ನಿಜಗುಣದೇವರು ಸಾವಿರ ಹಾಡುಗಳ ಸರದಾರರಾಗಿ ಹಲವಾರು ಧ್ವನಿಸುರುಳಿಗಳ ಮೂಲಕ ನಾಡಿನ ಭಕ್ತರ ಮನಗೆದ್ದಿದ್ದಾರೆ. ಅವರ ಕೆವಲ್ಯ ಕಿರಣ, ಗೀತ ಕುಸುಮ, ಭಾರತಕ್ಕೊಬ್ಬ ಭಾರತೀಶ, ಶಿವಾವತಾರಿ ಸಿದ್ದಲಿಂಗ, ಕೆವಲ್ಯ ಕನ್ನಡಿಯಂಥ ಪ್ರವಚನ ಕತಿ ರಚಿಸಿದ್ದಾರೆ. ಕೇದಾರ ಜಗದ್ಗುರುಗಳಿಂದ ಪ್ರವಚನ ಪ್ರಾ, ಹುಕ್ಕೇರಿ ಹಿರೇಮಠದ ದಸರಾ ಪ್ರಶಸ್ತಿ ರೇಣುಕಶ್ರೀ, ಕರ್ನಾಟಕ ಭೂಷಣ, ಸಾಹಿತ್ಯ ಸುಧಾಕರ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪಡೆದಿದ್ದಾರೆ.
ಜಾತ್ರಾ ಕಾರ್ಯಕ್ರಮಗಳು: ಜ.1ರಂದು ಶ್ರೀಮಠದಲ್ಲಿ ಮಹಾತ್ಮರ ಭವ್ಯ ಮೆರವಣಿಗೆ ಮೂಲಕ ಸ್ವಾಗತ, ಷಟಸ್ಥಲ ಧ್ವಜಾರೋಹಣ, ಕಳಸಾರೋಹಣ, ಕುಂಭಮೇಳ, ತತ್ತ್ವಾಮತ, ಗಣ್ಯರಿಗೆ ಸನ್ಮಾನ, ಜ.2ರಂದು ನಿಜಗುಣ ದೇವರಿಗೆ ಭಕ್ತರಿಂದ ತುಲಾಭಾರ, ಶೃಂಗಾರ ಕಿರೀಟ ಪೂಜೆ, ತತ್ತ್ವಾಮತ, ಸಿದ್ದಲಿಂಗೇಶ್ವರ ತೊಟ್ಟಿಲೋತ್ಸವ, ಸನ್ಮಾನ, ಮಹಾಪ್ರಸಾದ, ಸಾಂಸ್ಕತಿಕ ಕಾರ್ಯಕ್ರಮ ಜರುಗಲಿದೆ. ಜ.3ರಂದು ಮಹಾತ್ಮರ ತತ್ತ್ವಾಮತ, ಮಹಾಪ್ರಸಾದ, ಶ್ರೀಗಳ ತುಲಾಭಾರ, ಸಿದ್ದಲಿಂಗೇಶ್ವರ ರಥೋತ್ಸವ ಜರುಗಲಿದೆ.