

ಕಲಬುರಗಿ: ಹಿಂದೂ ಸಂಘಟನೆಯ ಮುಖಂಡರನ್ನು ಒದ್ದು ಒಳಗೆ ಹಾಕಿ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರು, ದಲಿತ ಸೇನೆಯ ಹೆಸರಿನ ಮುಖಂಡನೊಬ್ಬ ಅಂಕಲಗಿ ಗ್ರಾಮದಲ್ಲಿ ಮಾತನಾಡಿ, `ಲಿಂಗಾಯತರು ೬೦ ಲಕ್ಷ ಇದ್ದೀರಿ, ಮುಸ್ಲಿಮರು ೮೦ ಲಕ್ಷ ಇದ್ದೇವೆ. ನೆಲೋಗಿಯ ಪಿಎಸ್‌ಐ ಅಶೋಕ ಪಾಟೀಲ್ ಕುರುಬನಿದ್ದಾನೆ, ಕುರಿ ತಿಂತಾನೆ. ಹರಾಮ್‌ಕೋರ್ ಪಿಎಸ್‌ಐ' ಎಂದು ವಾಚಾಮಗೋಚರವಾಗಿ ಬೈಯುತ್ತಾನೆ. ಅವರನ್ನು ಬಂಧಿಸಿಲ್ಲ ಎಂದು ಶ್ರೀರಾಮಸೇನೆ ಗೌರವಾಧ್ಯಕ್ಷ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.
ಇದು ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಕೂಡಲೇ ಇಂತಹ ದುಷ್ಟ ಅಟ್ಟಹಾಸಗಳಿಗೆ ಕಡಿವಾಣ ಹಾಕಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.