ಬಿಸಿಯೂಟಕ್ಕೆ ಸಿದ್ಧಗಂಗಾ ಶ್ರೀ ಪ್ರೇರಣೆ

ಹುಣಸೂರು ನಗರದಲ್ಲಿ ಆಯೋಜಿಸಿದ್ದ ಶ್ರೀ ಶಿವಕುಮಾರಸ್ವಾಮೀಜಿ ಜಯಂತಿ ಕಾರ್ಯಕ್ರವನ್ನು ತಾಲೂಕು ವೀರಶೈವ ಸಂಘದ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಉದ್ಘಾಟಿಸಿದರು. ಡಾ.ವೃಷಭೇಂದ್ರಸ್ವಾಮಿ, ಭಾಗ್ಯಕುಮಾರ್, ಜಿ.ಮಹದೇವಪ್ಪ, ಗುರುಸ್ವಾಮಿ ಇತರರಿದ್ದಾರೆ.
--------
ಹುಣಸೂರು ನಗರದಲ್ಲಿ ಆಯೋಜಿಸಿದ್ದ ಶ್ರೀ ಶಿವಕುಮಾರಸ್ವಾಮೀಜಿ ಜಯಂತಿ ಕಾರ್ಯಕ್ರವನ್ನು ತಾಲೂಕು ವೀರಶೈವ ಸಂಘದ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಉದ್ಘಾಟಿಸಿದರು. ಡಾ.ವೃಷಭೇಂದ್ರಸ್ವಾಮಿ, ಭಾಗ್ಯಕುಮಾರ್, ಜಿ.ಮಹದೇವಪ್ಪ, ಗುರುಸ್ವಾಮಿ ಇತರರಿದ್ದಾರೆ. --------
Published on

ಹುಣಸೂರು: ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ನಡೆದಾಡುವ ದೇವರೆಂದೇ ಭಕ್ತರಿಂದ ಗುರುತಿಸಲ್ಪಟ್ಟಿದ್ದ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮೀಜಿ ಇಂದಿಗೂ ನಮ್ಮೆಲ್ಲರ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ತಾಲೂಕು ವೀರಶೈವ ಸಂಘದ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಅಭಿಪ್ರಾಯಪಟ್ಟರು.

ನಗರದ ಗುರುಬೂದಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿಯ 118ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಡಿನ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಸ್ವಾಮಿಗಳ ತ್ರಿವಿಧ ದಾಸೋಹವಾದ ಅನ್ನ, ಅಕ್ಷರ ಮತ್ತು ಆಶ್ರಯದ ಪರಿಕಲ್ಪನೆ ದೇಶಕ್ಕೆ ಮಾದರಿಯಾಯಿತು. ಸರ್ಕಾರಗಳು ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸುವಲ್ಲಿ ಸ್ವಾಮೀಜಿಯೇ ಪ್ರೇರಣೆಯಾಗಿದ್ದರು. ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳಿಗಾಗಿ ತಮ್ಮ ಜೋಳಿಗೆಯನ್ನು ಹಿಡಿದು ಹೊರಟು ಸಾಧನೆಯ ಶಿಖರವೇರಿದರು. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಮೇ 12ರಂದು ಅದ್ದೂರಿ ಬಸವಜಯಂತಿ: ಮುಖಂಡ ಡಾ.ವೃಷಭೇಂದ್ರಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಮೇ 12ರಂದು ಅದ್ದೂರಿಯಾಗಿ ಬಸವಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ. ಸಮಾಜದ ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಯುವನಾಯಕ ವಿಜಯೇಂದ್ರ, ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಸಂಘದ ಉಪಾಧ್ಯಕ್ಷ ಭಾಗ್ಯ ಕುಮಾರ್, ಡಾ.ವೃಷಭೇಂದ್ರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಮುಖಂಡರಾದ ಹರೀಶ್, ಶಿವಕುಮಾರ್, ಗುರುಸ್ವಾಮಿ, ಸಮಾಜದ ಮಹಿಳಾ ಅಧ್ಯಕ್ಷೆ ಬಸಮಣಿ, ಅಕ್ಕನ ಬಳಗದ ಮಹಿಳಾ ಅಧ್ಯಕ್ಷೆ ಶಾಂತಮ್ಮ, ಪತ್ರಕರ್ತರ ಸಹಕಾರ ಸಂಘ ನಿರ್ದೇಶಕ ಜಿ.ಮಹದೇವಪ್ಪ, ರೈತ ಮೋರ್ಚಾ ಅಧ್ಯಕ್ಷ ನಿಂಗರಾಜಪ್ಪ, ಮುಖಂಡರಾದ ರಾಣಿ, ಸೇರಿದಂತೆ ನೂರಾರು ಜನ ವೀರಶೈವ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

6ಊಓ2: ಹುಣಸೂರು ನಗರದಲ್ಲಿ ಆಯೋಜಿಸಿದ್ದ ಶ್ರೀ ಶಿವಕುಮಾರಸ್ವಾಮೀಜಿ ಜಯಂತಿ ಕಾರ್ಯಕ್ರವನ್ನು ತಾಲೂಕು ವೀರಶೈವ ಸಂಘದ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಉದ್ಘಾಟಿಸಿದರು. ಡಾ.ವೃಷಭೇಂದ್ರಸ್ವಾಮಿ, ಭಾಗ್ಯಕುಮಾರ್, ಜಿ.ಮಹದೇವಪ್ಪ, ಗುರುಸ್ವಾಮಿ ಇತರರಿದ್ದಾರೆ.

--------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net