ಬಂಡವಾಳ ಹೂಡಿಕೆ, ಕೈಗಾರಿಕೆ ಸ್ಥಾಪನೆಗೆ ಒತ್ತು ಕೊಡಿ: ಸಿದ್ದಗಂಗಾ ಶ್ರೀಗಳು

Swamiji_Letter
Published on

ತುಮಕೂರು: ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಕೇಂದ್ರ ನೂತನ ಸಚಿವ ಎಚ್​.ಡಿ.ಕುಮಾರಸ್ವಾಮಿಗೆ ಆಶೀರ್ವದಿಸಿ ಸೋಮವಾರ ಅಭಿನಂದನಾ ಪತ್ರ ನೀಡಿದರು. ಕರ್ನಾಟಕದಲ್ಲಿ ಬಂಡಾವಳ ಹೂಡಿಕೆಗೆ ಹಾಗೂ ಹೆಚ್ಚು ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡುತ್ತೀರೆಂದು ಭಾವಿಸುತ್ತೇನೆ ಎಂದು ಪತ್ರದಲ್ಲಿ ಶ್ರೀಗಳು ಹೇಳಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಜನಪರ ಕಾರ್ಯಗಳನ್ನು ರೂಪಿಸಿ ಜನರ ಪ್ರಶಂಸೆಗೆ ಪಾತ್ರರಾಗಿದ್ದೀರಿ. ಆ ಹಿನ್ನೆಲೆಯಲ್ಲಿ ನಿಮ್ಮ ಪ್ರತಿಭೆ ಮತ್ತು ಸಾಧನೆಗಳ ಪ್ರತಿಲವಾಗಿ ಈ ಸ್ಥಾನ ಸಿಕ್ಕಿದೆ. ನಿಮ್ಮ ವ್ಯಕ್ತಿತ್ವ, ಅನುಭವದಲ್ಲಿ ಸಚಿವ ಸ್ಥಾನದಲ್ಲಿ ಅಭೂತಪೂರ್ವ ಬದಲವಾವಣೆ, ಅಭಿವೃದ್ಧಿಯನ್ನು ತರಬಲ್ಲೀರೆಂಬ ವಿಶ್ವಾಸ ನಮಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ನೀವು ನೀಡಲಿರುವ ಕೊಡುಗೆಗಳು ಮತ್ತು ಸೇವೆಗಗಳು ಅತ್ಯಮೂಲ್ಯವೆನಿಸಲಿವೆ ಎಂದು ಆಶೀರ್ವದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net