ಸಹಕಾರಿ ಕ್ಷೇತ್ರದಿಂದ ಅಭಿವೃದ್ಧಿ ಸಾಧ್ಯ

IMG-20230819-WA0087
Published on

ಹುಮನಾಬಾದ್: ಸಹಕಾರಿ ಕ್ಷೇತ್ರ ಎಲ್ಲ ರೀತಿಯ ಅಭಿವೃದ್ಧಿಯಲ್ಲಿ ಮಹತ್ವದಾಗಿದೆ. ನಮ್ಮ ಭಾಗದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಕಾರ್ಯ ಚಟುವಟಿಕೆ ನಡೆಸುತ್ತಿರುವುದು ಈ ಭಾಗದ ರೈತರು, ಸಹಕಾರಿಗಳಿಗೆ ಉಪಯೋಗವಾಗಲಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಹಳ್ಳಿಖೇಡ(ಬಿ)ದಲ್ಲಿ ಶುಕ್ರವಾರ ಸಿದ್ಧಸಿರಿ ಸೌಹಾರ್ದ ಸಹಕಾರಿಯ ೧೫೪ನೇ ಶಾಖೆಯನ್ನು ಉದ್ಘಾಟನೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಹಾಗೂ ರಾಜಕೀಯದಲ್ಲೂ ಪರಿಣಿತಿ ಹೊಂದಿರುವ ವಿಜಯಪುರ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಯತ್ನಾಳರು ಶಾಖೆ ಆರಂಭಿಸಿರುವುದು ಉತ್ತಮ ನಡೆ ಎಮದರು.
ಸಹಕಾರಿ ಮೂಲಕ ಸಕ್ಕರೆ ಕಾರ್ಖಾನೆ ಆರಂಭಿಸಿ, ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೂ ಆದ್ಯತೆ ನೀಡಿದ್ದಾರೆ. ಈ ಭಾಗದ ರೈತರು ಸಹಕಾರಿ ಬ್ಯಾಂಕ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬಿಎಸ್‌ಎಸ್‌ಕೆ ಅಧ್ಯಕ್ಷ ಸುಭಾಷ ಕಲ್ಲೂರ ಮಾತನಾಡಿ, ಯತ್ನಾಳ ಅವರ ಕಾರ್ಯ ಶೈಲಿ ಅಭಿವೃದ್ಧಿಯ ದೃಷ್ಟಿ ಹೊಂದಿದೆ. ಚಿಂಚೋಳ್ಳಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದ್ದು, ರೈತರಿಗೆ ಅನುಕೂಲವಾಗಲಿದೆ. ಬಿಎಸ್‌ಎಸ್‌ಕೆ ಲೀಸ್ ಪಡೆದು ಆರಂಭಿಸಿ ಎಂದು ಮನವಿ ಮಾಡಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿ, ಸಹಕಾರಿ ಬ್ಯಾಂಕ್ ಆರಂಭಿಸಿದ್ದು, ಎಲ್ಲರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು. ಚಳಕಾಪುರ ಶ್ರೀ ಸಿದ್ಧಾರೂಢ ಮಠದ ಶ್ರೀ ಶಂಕರಾನAದ ಸ್ವಾಮೀಜಿ, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಶರಣು ಸಲಗರ, ಪ್ರಮುಖರಾದ ವಿಷ್ಣುಕಾಂತ ಡಾವಳೆಗರ, ಶಿವಕುಮಾರ ತೀರ್ಥ, ದಿಲೀಪಕುಮಾರ ಕಿವಡೆ , ಮಲ್ಲಪ್ಪ ಸೀತಾಳಗೇರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net