ಹೊಸ ಮೊಬೈಲ್ ಫೋನ್ ಕೊಡಲಿ

11-sdp-anganavadi
Published on

ಸಿದ್ದಾಪುರ: ಹೊಸ ಮೊಬೈಲ್ ಫೋನ್ ಪೂರೈಕೆ ಸರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ತಾಲೂಕು ಅಂಗನವಾಡಿ ಸಮಿತಿ ಸದಸ್ಯರು ಸ್ಥಳೀಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್. ಪೂರ್ಣಿಮಾ ಅವರ ಮೂಲಕ ಪ್ರಧಾನಮಂತ್ರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಹೊಸ ಮೊಬೈಲ್ ಫೋನ್ ಒದಗಿಸಬೇಕು. 2023ರ ಬಜೆಟ್‌ನಲ್ಲಿ ಹೇಳಿದಂತೆ 1 ಸಾವಿರ ರೂ. ಹೆಚ್ಚುವರಿ ಗೌರವಧನ ಬಿಡುಗಡೆ ಮಾಡಬೇಕು. ಕನಿಷ್ಠ ವೇತನ ನಿಗದಿ, ಸಾಮಾಜಿಕ ಭದ್ರತೆ, ಕೆಲಸದಿಂದ ವಜಾ ಮಾಡಿರುವವರ ಮರು ನೇಮಕಾತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ತಾಲೂಕು ಅಂಗನವಾಡಿ ಸಮಿತಿ ಅಧ್ಯಕ್ಷೆ ಸುಧಾ ಕೊಂಡ್ಲಿ, ಕಾರ್ಯದರ್ಶಿ ಸಾವಿತ್ರಿ ಗೌಡ, ಖಜಾಂಚಿ ಸುಮಿತ್ರಾ, ಸದಸ್ಯರಾದ ಗೀತಾ ಕೊಂಡ್ಲಿ, ಶಂಕುಂತಲಾ ನಾಯ್ಕ, ಸುನಂದಾ ನಾಯ್ಕ, ಸುಶೀಲಾ ನಾಯ್ಕ, ಸುಮಿತ್ರಾ ನಾಯ್ಕ, ಪವಿತ್ರಾ ನಾಯ್ಕ, ಗೀತಾ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net