ಅನಾರೋಗ್ಯ ಪೀಡಿತವಾದ ಆರೋಗ್ಯ ಕೇಂದ್ರಗಳು!

ಅಡ್ಡಗಲ್​ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚುಮದ್ದು ಪಡೆಯಲು ನಿಂತಿರುವ ಸಾರ್ವಜನಿಕರು.
IMG-20240823-WA0085
ಅಡ್ಡಗಲ್​ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚುಮದ್ದು ಪಡೆಯಲು ನಿಂತಿರುವ ಸಾರ್ವಜನಿಕರು.
Published on

ವೈದ್ಯರಿದ್ದರೆ ಶುಶ್ರೂಷಕಿಯರ ಕೊರತೆ- ರಾಯಲ್ಪಾಡು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಪರದಾಟ



ರಾಯಲ್ಪಾಡು : ಇತ್ತೀಚಿನ ದಿನಗಳಲ್ಲಿ ರಾಜ್ಯ್ಯದ್ಯಂತ ಡೆಂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳಿಂದ ಜನರು ಬಳಲುತ್ತಿರುವುದು ತಿಳಿದಿದ್ದರೂ, ಗಡಿಭಾಗದ ಆರೋಗ್ಯಕೇಂದ್ರಗಳು ಸರ್ಕಾರದ ರ್ನಿಲಕ್ಷ$್ಯಕ್ಕೆ ಮೂಲೆಗುಂಪಾಗಿದ್ದು, ನಾಗರಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ರಾಯಲ್ಪಾಡು ಶ್ರೀನಿವಾಸಪುರ ತಾಲೂಕಿನಲ್ಲಿಯೇ ದೊಡ್ಡ ಹೋಬಳಿಯಾಗಿದೆ. ರಾಯಲ್ಪಾಡು ಕೇಂದ್ರಕ್ಕೆ ಕಾಯಂ ವೈದ್ಯರಿಲ್ಲದೆ ನಾಗರಿಕರು ಅನಾರೋಗ್ಯದಿಂದಾಗಿ ಬಳಲುತ್ತಿದ್ದಾರೆ. ಈ ನಡುವೆ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರಿಲ್ಲದೆ ಮುದಿಮಡುಗು ಆರೋಗ್ಯ ಕೇಂದ್ರದಿಂದ ನಾಲ್ಕು ದಿನ ವೈದ್ಯರು ಬಂದು ಹೋಗುತ್ತಿದ್ದಾರೆ. ಎರಡು ದಿನ ಕೂರಿಗೇಪಲ್ಲಿ ಆರೋಗ್ಯ ಕೇಂದ್ರದಿಂದ ವೈದ್ಯರು ಬರುತ್ತಾರೆ. ಇಬ್ಬರು ಶುಶ್ರೂಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಮುದಿಮಡುಗು ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯರೇ ಇಲ್ಲ. ಸರ್ಕಾರ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಸಿಬ್ಬಂದಿ ವ್ಯವಸ್ಥೆ ಮಾಡದೆ ಲಕ್ಷಾಂತರ ರೂ. ವೆಚ್ಚ ಮಾಡಿ ಕಟ್ಟಿದ ಕಟ್ಟಡಗಳು ಭೂತ ಬಂಗಲೆಯಂತಾಗುತ್ತಿವೆ. ಅಡ್ಡಗಲ್​ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನುರಿತ ವೈದ್ಯರು ಇದ್ದಾರೆ. ರಾಯಲ್ಪಾಡು, ಮುದಿಮಡುಗು, ಕೂರಿಗೇಪಲ್ಲಿ ಹಾಗು ಸುತ್ತಮುತ್ತಲಿನ ನಾಗರಿಕರು ಚಿಕಿತ್ಸೆಗಾಗಿ ಅಡ್ಡಗಲ್​ ಆರೋಗ್ಯ ಕೇಂದ್ರಕ್ಕೆ ಹೋಗುತ್ತಿದ್ದಾರೆ. ಆದರೆ. ಈ ಆಸ್ಪತ್ರೆಗೆ ಮೂವರು ಶುಶ್ರೂಷಕಿಯರ ಅಗತ್ಯ ಇದೆ. ಸದ್ಯ ಒಬ್ಬರೇ ಹಗಲು ರಾತ್ರಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಇನ್ನೊಬ್ಬರು
ರಜೆಯಲ್ಲಿದ್ದಾರೆ. ಅಗತ್ಯ ಸಿಬ್ಬಂದಿ ಕೊರತೆಯಿಂದ ಚಿಕಿತ್ಸೆಗಾಗಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಎದುರಾಗಿದೆ.
ಇನ್ನಾದರೂ ಇಲಾಖೆಯ ಹಿರಿಯ ಅಧಿಕಾರಿಗಳು ಗಡಿ ಭಾಗದ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಹಾಗೂ ವೈದ್ಯ ಸಿಬ್ಬಂದಿ ನಿಯೋಜಿಸಿ ಈ ಭಾಗದ ಜನರ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಡಾ.ಕೆ.ವಿ.ಕವಿತಾ. ಅಡ್ಡಗಲ್​ ಪ್ರಾಥಮಿಕ ಆರೋಗ್ಯ ಕೇಂದ್ರ

ತಾಲೂಕಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. ಈ ಹಿಂದಿನ ಜನಸಂಖ್ಯೆ ಆಧಾರದ ಮೇಲೆ ವೈದ್ಯರು ಹಾಗು ಸಿಬ್ಬಂದಿ ವ್ಯವಸ್ಥೆ ಮಾಡಲಾಗಿತ್ತು. ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ವೈದ್ಯರು ಹಾಗು ಸಿಬ್ಬಂದಿ ನಿಯೋಜನೆ ಮಾಡಬೇಕಾಗಿದೆ. ಸದ್ಯ ಇದೇ ತಿಂಗಳು 30 ರಂದು ವೈದ್ಯರು ಹಾಗು ಶುಶ್ರೂಷಕಿಯರ ನೇಮಕಾತಿ ಸಂದರ್ಶನವಿದ್ದು, ತಾಲೂಕಿನ ರಾಯಲ್ಪಾಡು, ಸೋಮಯಾಜಹಳ್ಳಿ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು, ಖಾಲಿ ಇರುವ ಆರೋಗ್ಯ ಕೇಂದ್ರಕ್ಕೆ ಶುಶ್ರೂಷಕಿಯರನ್ನು ನೇಮಕ ಮಾಡಲಾಗುವುದು.

ಈಗಾಗಲೇ ಸಿಬ್ಬಂದಿ ಕೊರತೆಗೆ ಸಂಬಂಧಿಸಿದಂತೆ ತಾಲೂಕು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲಿ ಸಿಬ್ಬಂದಿ ಕೊರತೆ ನೀಗಿಸುವ ಭರವಸೆ ನೀಡಿದ್ದಾರೆ.

ಮಹಮ್ಮದ್​ ಶರೀಫ್​ ಟಿಎಚ್​ಒ ಶ್ರೀನಿವಾಸಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net