

ಮಂಗಳೂರು: ನವದೆಹಲಿಯ ಸಾಹಿತ್ಯ ಅಕಾಡೆಮಿ, ಮಂಗಳೂರಿನ ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆಯ ಆಶ್ರಯದಲ್ಲಿ ಸೆಪ್ಟಂಬರ್ 2 ರಂದು ಸಂಜೆ 3.30 ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಗೆಲ್ಗೆ ಸಭಾಭವನದಲ್ಲಿ ಆಯೋಜಿಸಲಾದ Through My Window ಕಾರ್ಯಕ್ರಮದಲ್ಲಿ ಮುಂಬಯಿಯ ಖ್ಯಾತ ಕನ್ನಡ ಲೇಖಕಿ/ ಅನುವಾದಕಿ ಶ್ಯಾಮಲಾ ಮಾಧವ ಅವರು ತಮ್ಮ ಅಜ್ಜ ವಿದ್ವಾಂಸ ಸರ್ದಾರ್ ಉಚ್ಚಿಲ ಅಲೋಶಿಯಸ್ ಕಣ್ಣಪ್ಪ ಇವರ ಬದುಕು ಮತ್ತು ಬರೆಹದ ಬಗ್ಗೆ ಉಪನ್ಯಾಸ ನೀಡಲಿರುವರು.
ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಮಾರ್ಟಿಸ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನವ ದೆಹಲಿ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ, ಕೊಂಕಣಿ ವಿಭಾಗ ಮುಖ್ಯಸ್ಥ ಮೆಲ್ವಿನ್ ರೊಡ್ರಿಗಸ್ ಹಾಜರಿರುವರು.