ಮಾನವೀಯ ದೃಷ್ಟಿಕೋನದಿಂದ ಸಮಸ್ಯೆಗೆ ಪರಿಹಾರ: ಶ್ಯಾಮಲಾ ಎಸ್. ಕುಂದರ್ ಹೇಳಿಕೆ

shyamala new
Published on

ಕಾರ್ಕಳ: ಮಾನವೀಯತೆ ಮೌಲ್ಯಕ್ಕೆ ಒತ್ತು ನೀಡಿದಾಗ ಸಮಾಜದಲ್ಲಿ ಕಂಡು ಬರುವ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.

ಕಾರ್ಕಳ ಪುರಸಭೆ ವ್ಯಾಪ್ತಿಯ 11ನೇ ವಾರ್ಡ್‌ನ ಕಾವೇರಡ್ಕದಲ್ಲಿ ತೀರಾ ಬಡತನ ಹಿನ್ನೆಲೆಯುಳ್ಳ ವಾಸು ಆಚಾರ್ಯ ಎಂಬುವರ ಮನೆಗೆ ಭೇಟಿ ನೀಡಿದಾಗ ಅಲ್ಲಿನ ಸಮಸ್ಯೆಗಳನ್ನು ಮನಗಂಡು ಇಲಾಖಾಧಿಕಾರಿಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ವಾಸು ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಅಂಗವಿಕಲರು. ಮನೆಯ ಸದಸ್ಯೆ ಮಹಿಳೆಯೊಬ್ಬರು ಮನೆಯಿಂದ ಹೊರಹೋಗಿ ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಬಡ ಕುಟುಂಬಕ್ಕೆ ನೆರವಾಗುವ ಬಗ್ಗೆ ಜತೆಗಿದ್ದವರ ಜತೆ ಚರ್ಚಿಸಿದರು. ಘಟನಾ ಸ್ಥಳಕ್ಕೆ ಸಿಡಿಪಿಒ ಅಧಿಕಾರಿ ಉಮೇಶ್ ಟಿ.ಎನ್. ಅವರನ್ನು ಕರೆಸಿಕೊಂಡಿದ್ದರು.

ಭೇಟಿ ಸಂದರ್ಭ ಅವರು ತಾಲೂಕು ಆಸ್ಪತ್ರೆ ಬಳಿಯಿರುವ ಕೋವಿಡ್ ಲಸಿಕೆ ಕೇಂದ್ರ, ಬಾಹುಬಲಿ ಬೆಟ್ಟ ಭಾಗದಲ್ಲಿ ತೆರೆಯಲು ಉದ್ದೇಶಿಸಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಪುರಸಭೆ ಉಪಾಧ್ಯಕ್ಷೆ ಪಲ್ಲವಿ, ಪುರಸಭೆ ಮಾಜಿ ಸದಸ್ಯ ಪ್ರಕಾಶ್ ರಾವ್, ಸಂತೋಷ್ ರಾವ್, ವಿಜಯ ಸಪಳಿಗ, ಅನಿಲ್ ಪ್ರಭು, ಶಂಕರ್ ನಾಯ್ಕ, ರಮೇಶ್ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net