ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ : ಡಾ.ಉಮ್ಮರ್ ಬೀಜದಕಟ್ಟೆ ಅನಿಸಿಕೆ

New Project (14)
Published on

ಸುಳ್ಯ: ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮವಾತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿ ದೇಹ ಮತ್ತು ಮನಸ್ಸು ಸದಾ ಉಲ್ಲಸಿತವಾಗಿರಿಸಲು ಕ್ರೀಡೆ ಸಹಕಾರಿ ಎಂದು ಬೀಜದಕಟ್ಟೆ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಹೇಳಿದರು.

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಸುಳ್ಯ ಪ್ರೆಸ್ ಕ್ಲಬ್ ಸದಸ್ಯರಿಗಾಗಿ ಹಮ್ಮಿಕೊಂಡ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ನಟರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಶಿವರಾಜ್ ಗಾಯಕ್‌ವಾಡ್, ಗ್ರಾಮ ಆಡಳಿತಾಧಿಕಾರಿ ತಿಪ್ಪೇಶ್ ಉಸ್ಥಿತರಿದ್ದರು. ಪ್ರೆಸ್ ಕ್ಲಬ್ ನಿರ್ದೇಶಕರಾದ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿದರು. ದುರ್ಗಾಕುಮಾರ್ ನಾಯರ್ ಕೆರೆ ವಂದಿಸಿದರು. ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ಪ್ರೆಸ್‌ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ, ಕೋಶಾಧಿಕಾರಿ ರಮೇಶ್ ನೀರಬಿದಿರೆ, ಪತ್ರಕರ್ತ ಗಂಗಾಧರ ಮಟ್ಟಿ, ಪ್ರೆಸ್‌ಕ್ಲಬ್‌ನ ನಿರ್ದೇಶಕರು, ಸದಸ್ಯರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.

ಪಂದ್ಯಾಟದ ವಿಜೇತರು

ಷಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಶಿವರಾಮ ಕಜೆಮೂಲೆ ಪ್ರಥಮ, ಅನಿಲ್ ಕಳಂಜ ದ್ವಿತೀಯ ಪ್ರಶಸ್ತಿ ಪಡೆದರು. ಪುರುಷರ ಡಬಲ್ಸ್‌ನಲ್ಲಿ ಅನಿಲ್ ಕಳಂಜ ಹಾಗೂ ಶ್ರೀಧರ ಕಜೆಗದ್ದೆ ತಂಡ ಪ್ರಥಮ ಮತ್ತು ಗಂಗಾಧರ ಕಲ್ಲಪಳ್ಳಿ ಹಾಗೂ ಶರೀಫ್ ಜಟ್ಟಿಪಳ್ಳ ತಂಡ ದ್ವಿತೀಯ ಪ್ರಶಸ್ತಿ ಪಡೆದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಜಯಶ್ರೀ ಕೊಯಿಂಗೋಡಿ ಪ್ರಥಮ ಹಾಗೂ ಪ್ರಜ್ಞಾ ಎಸ್.ನಾರಾಯಣ ಅಚ್ರಪ್ಪಾಡಿ ದ್ವಿತೀಯ ಪ್ರಶಸ್ತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net