

ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯ ವತಿಯಿಂದ ೬೦ನೇ ವರ್ಷದ ದಸರಾ ಜನೋತ್ಸವ ಅದ್ಧೂರಿಯಾಗಿ ಸುಮಾರು ೧೮ ಲಕ್ಷ ವೆಚ್ಚದಲ್ಲಿ ನಡೆಸಲು ಸಿದ್ಧತೆ ನಡೆಸಿದೆ.
ಪ್ರಸಕ್ತ ಸಾಲಿನಲ್ಲಿ ’ಆದಿಶಕ್ತಿಯಿಂದ ಶುಂಭ ನಿಶುಂಬರ ಸಂಹಾರ’ ಕಥಾ ಸಾರಾಂಶವನ್ನು ಶೋಭಾಯಾತ್ರೆಯ ಮಂಟಪದಲ್ಲಿ ಅಳವಡಿಸಲಾಗಿದೆ. ಸುಮಾರು ೧೮ ಲಕ್ಷ ವೆಚ್ಚದಲ್ಲಿ ೨೪ ಕಲಾಕೃತಿಯನ್ನು ಬಳಸಲಾಗುತ್ತಿದೆ. ಸ್ಟೂಡಿಯೋ ಅ್ಯಂಡ್ ಸೌಂಡ್ಸ್ ಮರ್ಕರ ಪವರ್ಸ್ ಲೋಕೇಶ್ ನಿರ್ವಹಿಸಲಿದ್ದಾರೆ. ಪ್ಲಾಟ್ ಪಾರಂ ಸೆಟ್ಟಿಂಗ್ಸ್‌ನಲ್ಲಿ ಜಯರಾಮ್ ಆಚರ್, ಶೇಖರ್, ಜನ್ನು, ರಾಕಿ, ಶಶಿ ನಿರ್ಮಿಸಲಿದ್ದಾರೆ.
ಮೈಸೂರಿನ ಹುದುಬೂರಿನ ಮಹದೇವಪ್ಪ ಅ್ಯಂಡ್ ಸನ್ಸ್ ಕಲಾವಿದರು ಕಲಾಕೃತಿ ತಯಾರಿ ಮಾಡಿದ್ದಾರೆ. ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ. ಲೈಟಿಂಗ್ಸ್ ಬೋರ್ಡ್‌ನ್ನು ಎರ್ಣಕುಲಂನಿಂದ ತರಿಸಲಾಗುತ್ತಿದೆ. ಫಯರ್ ಬಾಕ್ಸ್‌ನ್ನು ಜ್ಹೀ ಕನ್ನಡ ಖ್ಯಾತೀಯ ರಘು ಶ್ರಾರ್ಫ ನಿರ್ವಹಿಸಲಿದ್ದಾರೆ. ಫ್ರೆಂಟ್ ಸೆಟ್ಟಿಂಗ್ಸ್ ವಿಠಲ ಮತ್ತು ತಂಡ, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಗುಣ ಮತ್ತು ಜರ್ನಾಧನ ನಿರ್ವಹಿಸಲಿದ್ದಾರೆ ಎಂದು ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯ ಅಧ್ಯಕ್ಷ ಅಮೆಮನೆ ದೇವಿಪ್ರಸಾದ್ ವಿಜಯವಾಣಿಗೆ ತಿಳಿಸಿದರು.
ಪ್ರಶಸ್ತಿ ಪಟ್ಟಿ: ೨೦೦೮ರಲ್ಲಿ -ದ್ವಿತೀಯ, ೨೦೦೯ರಲ್ಲಿ -ತೃತೀಯ, ೨೦೧೦ರಲ್ಲಿ -ಪ್ರಥಮ, ೨೦೧೨ರಲ್ಲಿ -ದ್ವಿತೀಯ, ೨೦೧೩ರಲ್ಲಿ -ಪ್ರಥಮ, ೨೦೧೪ರಲ್ಲಿ -ದ್ವಿತೀಯ, ೨೦೧೫ರಲ್ಲಿ -ದ್ವಿತೀಯ, ೨೦೧೬ರಲ್ಲಿ -ದ್ವಿತೀಯ ಬಹುಮಾನ ಪಡೆದಿದೆ.
ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯ ವತಿಯಿಂದ ಸುಮಾರು ೧೮ ಲಕ್ಷ ವೆಚ್ಚದಲ್ಲಿ ವಜ್ರ ಮಹೋತ್ಸವದೊಂದಿಗೆ ೬೦ನೇ ವರ್ಷದ ಅದ್ದೂರಿಯ ಶೋಭಯಾತ್ರೆ ನಡೆಸಲು ಸಿದ್ಧತೆ ಕೈಗೊಂಡಿದೆ. ಸುಮಾರು ೨೪ ಕಲಾಕೃತಿಗಳನ್ನು ಬಳಸಲಾಗಿದ್ದು, ಪ್ರಶಸ್ತಿಗೆ ಪೈಪೋಟಿ ನೀಡಲಿದೆ.ಅಮೆಮನೆ ದೇವಿಪ್ರಸಾದ್, ಅಧ್ಯಕ್ಷರು, ಚೌಡೇಶ್ವರಿ ಬಾಲಕ ಭಕ್ತ ಮಂಡಳಿ