ಶುಭಾ ಮಂಜುನಾಥ್‌ಗೆ ಪಿಎಚ್.ಡಿ

19blrp1-shubha
ಶುಭಾ ಮಂಜುನಾಥ್
Published on

ಬೇಲೂರು: ಪಟ್ಟಣದ ವಾಸಿ ಶುಭಾ ಮಂಜುನಾಥ್ ಅವರು ಬೆಂಗಳೂರಿನ ತೋಟಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಬಿ.ಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ‘ಟೊಮ್ಯಾಟೊ ಇನ್ ಬ್ರೀಡ್’ ಇಳುವರಿ ಮತ್ತು ಹಣ್ಣಿನ ಗುಣಮಟ್ಟದ ಲಕ್ಷಣಗಳ ವೈವಿಧ್ಯತೆ ಮತ್ತು ಸ್ಥಿರತೆಯ ವಿಶ್ಲೇಷಣೆ’ ವಿಷಯ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಬಾಗಲಕೋಟದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.

ಇವರು ಪಟ್ಟಣದ ಶುಭಾ ಕ್ಲಿನಿಕ್ ವೈದ್ಯ ಡಾ.ಸಂತೋಷ್‌ಕುಮಾರ್ ಮತ್ತು ಕರಗಡ ಪ್ರಾಥಾಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೀತಾ ಅವರ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net