

ಬೆಳಗಾವಿ:ಬೆಂಗಳೂರು ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ "ವಂದೇ ಭಾರತ ಎಕ್ಸಪ್ರೆಸ್ ರೈಲು" ಸೇವೆಯನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಕುರಿತು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ತಿಳಿಸಿರುವುದಾಗಿ ಸಂಸದ ಜಗದೀಶ ಶೆಟ್ಟರ ತಿಳಿಸಿದರು.
ಬೆಂಗಳೂರು- ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ ವಂದೇ ಭಾರತ ಎಕ್ಸಪ್ರೆಸ್ ರೈಲು ಸೇವೆಯನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಕುರಿತು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ರೇಲ್ವೆ ರಾಜ್ಯ ಸಚಿವರು ವಿ. ಸೋಮಣ್ಣ ಅವರೊಂದಿಗೆ ಹಲವು ಬಾರಿ ಸಭೆಯನ್ನು ಚರ್ಚೆಯನ್ನು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲಿ ಒತ್ತಾಯಿಸಲಾಗಿತ್ತು.
ಬೆಳಗಾವಿ-ಬೆಂಗಳೂರು ನಡುವೆ ಬೆಳಗಾವಿ ನಗರದಿಂದ ಹೊಸ ವಂದೇ ಭಾರತ ಎಕ್ಸಪ್ರೆಸ್ ರೈಲು ಸಂಚಾರವನ್ನು ಬೆಳ್ಳಿಗ್ಗೆ ಪ್ರಾರಂಭಿಸಿ ಬೆಂಗಳೂರು ತಲುಪಿ ತದನಂತರ ಮದ್ಯಾಹ್ನ ಬೆಂಗಳೂರಿನಿಂದ ಹೊರಟು ರಾತ್ರಿ ಬೆಳಗಾವಿ ತಲುಪುವ ಬಗ್ಗೆ ವಿಷಯ ತಿಳಿದು ಬಂದಿದೆ.
ಅದರಂತೆ ಅದಷ್ಟು ಬೇಗನೆ ಈ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ದಿನಾಂಕ ಒಂದನ್ನು ನಿಗಧಿ ಪಡಿಸಿ ಬೆಳಗಾವಿ ಜಿಲ್ಲಾ ರಹವಾಸಿಗಳಿಗೆ ಅನಕೂಲತೆ ಕಲ್ಪಿಕೋಡುವಂತೆ ಕೇಂದ್ರ ರೇಲ್ವೆ ಸಚಿವರಿಲ್ಲಿ ವಿನಂತಿಸಿದ್ದಾರೆ.