ದೆಹಲಿ ಸಂಸತ್ತಿನ ಆವರಣದಲ್ಲಿ ಬೆಳವಡಿ ಮಲ್ಲಮ್ಮಳ ಮೂರ್ತಿ ಸ್ಥಾಪನೆ; ಬೆಳಗಾವಿ ನಿಯೋಗ‌ ಆಗ್ರಹ

IMG-20241002-WA0003.jpg
Published on

ಬೆಳಗಾವಿ:ನೂತನ ಸಂಸದ ಭವನ ಆವರಣದಲ್ಲಿ ವೀರ ರಾಣಿ ಬೆಳವಡಿ ಮಲ್ಲಮ್ಮಳ EQUESTRIAN STATUE (ಕುದುರೆ ಸವಾರಿ ಮೂರ್ತಿ) ಸ್ಥಾಪನೆಗಾಗಿ ಸಂಸದ ಜಗದೀಶ ಶೆಟ್ಟರ ನೇತೃತ್ವದ ನಿಯೋಗ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಅವರಿಗೆ ಮನವಿ ಸಲ್ಲಿಸಿರು.

ವೀರ ರಾಣಿ ಬೆಳವಡಿ ಮಲ್ಲಮ್ಮ ಒಬ್ಬ ಧೀರ ಮಹಿಳೆ, 16ನೇ ಶತಮಾನದಲ್ಲಿ ಸುಮಾರು 2000ಕ್ಕೂ ಹೆಚ್ಚು ಮಹಿಳೆಯರನ್ನು ಹೊಂದಿದ ಸೈನ್ಯವನ್ನು ಅವರು ಸ್ಥಾಪಿಸಿದ್ದರು. ಅವರು ಹೊಂದಿದ ಸಾಮ್ರಾಜ್ಯ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರ ಪ್ರತಿ ವರ್ಷವೂ ಎರಡು ದಿನಗಳ ಕಾಲ ಉತ್ಸವವನ್ನು ಆಚರಿಸುತ್ತದೆ ಎಂದು ಸಂಕ್ಷಿಪ್ತವಾಗಿ ಕೇಂದ್ರ ಸಂಸದೀಯ ಸಚಿವರಿಗೆ ಸಂಸದಜಗದೀಶ್ ಶೆಟ್ಟರ್ ಅವರು ತಿಳಿಸಿದರು.

ವೀರರಾಣಿ ಬೆಳವಡಿ ಮಲ್ಲಮ್ಮನ ಕೊಡುಗೆಯನ್ನು ಗಣನೆಗೆ ತೆಗೆದುಕೊಂಡು, ಅವರ ಗೌರವಾರ್ಥ ಮುಂಬರುವ ದಿನಗಳಲ್ಲಿ ನವದೆಹಲಿಯ "ನೂತನ ಸಂಸದ ಭವನ ಆವರಣದಲ್ಲಿ" ಅವರದ್ದೊಂದು EQUESTRIAN STATUE (ಕುದುರೆ ಸವಾರಿ) ಮೂರ್ತಿ ಸ್ಥಾಪನೆ ಮಾಡುವಂತೆ ಕೋರಿದರು.

ವಿಷಯವನ್ನು ಆಲಿಸಿದ ಕೇಂದ್ರ ಸಚಿವರು ಪ್ರಸ್ತಾಪಿತ ಬೇಡಿಕೆಯನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಹಾಗೂ ಲೋಕಸಭಾ ಅಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದಾರೆಂದು ಸಂಸದರಾದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.

ಪ್ರಸ್ತಾಪಿತ ವಿಷಯವಾಗಿ ಪ್ರಥಮವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ವಿನಂತಿಸಿ ಪತ್ರ ಬರೆದಿದ್ದು, ಸದರಿ ಬೇಡಿಕೆಯನ್ನು ಅವಲೋಕಿಸುವಂತೆ ಕೇಂದ್ರ ಸಂಸದೀಯ ಸಚಿವರಾದ ಕಿರಣ್ ರಿಜೀಜು ಇವರಿಗೆ ಪ್ರಧಾನ ಮಂತ್ರಿಗಳು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಇಂದು ಈ ಭೇಟಿಗೆ ಅವಕಾಶವನ್ನು ಕೇಂದ್ರ ಸಚಿವರು ನಿಯೋಗಕ್ಕೆ ನೀಡಿದ್ದು ಇಲ್ಲಿ ಸ್ಮರಣೀಯ.

ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ ನಿಯೋಗದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ(ರಿ) ಬೆಳವಡಿ ಕಾರ್ಯದರ್ಶಿಗಳು, ಸವಿತಾ ಪಾಟೀಲ್, ಉಪಾಧ್ಯಕ್ಷರು ನೀಲವ್ವ ಕರಿಕಟ್ಟಿ, ಸದಸ್ಯರು ಶಪಾರ್ವತಿ ಕರಿಕಟ್ಟಿ, ಕಾನೂನು ಸಲಹೆಗಾರರು ರವೀಂದ್ರ ತೋಟಿಗೇರ, ಸಲಹೆಗಾರರು ಪ್ರಕಾಶ್ ಐಹೊಳೆಯವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net