ಶ್ರುತಿ ರವಿ ಹೊಸಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ಹೊಸಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರುತಿ ರವಿ ಅವಿರೋಧವಾಗಿ ಆಯ್ಕೆಯಾದರು. ದಯಾನಂದ್,  ರಘುನಂದನ್ , ವೆಂಕಟೇಶ್, ಮಹಾದೇವ ಇದ್ದರು.
ಹೊಸಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರುತಿ ರವಿ ಅವಿರೋಧವಾಗಿ ಆಯ್ಕೆಯಾದರು. ದಯಾನಂದ್, ರಘುನಂದನ್ , ವೆಂಕಟೇಶ್, ಮಹಾದೇವ ಇದ್ದರು.
Published on

ಮದ್ದೂರು: ತಾಲೂಕಿನ ಹೊಸಕೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಶ್ರುತಿ ರವಿ ಅವಿರೋಧವಾಗಿ ಆಯ್ಕೆಯಾದರು.

ಮಂಜುಳಮ್ಮ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶ್ರುತಿ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ರಾಮಲಿಂಗಯ್ಯ ಅವಿರೋಧ ಆಯ್ಕೆ ಘೋಷಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ, ಸದಸ್ಯರಾದ ದಯಾನಂದ್, ರಘುನಂದನ್, ವೆಂಕಟೇಶ್, ಮಹದೇವು, ಗಾಯತ್ರಿ, ನಳಿನಾ, ಮಂಜುಳಾ, ಎನ್.ಟಿ.ಕೃಷ್ಣಪ್ಪ, ಶಿವಲಿಂಗಯ್ಯ, ಜಯರತ್ನಾ, ವಿನೋದ್, ಮಂಗಳಮ್ಮ, ಮುಖಂಡರಾದ ಕೆಂಪು ಬೋರಯ್ಯ, ರವಿ, ಶಿವಕುಮಾರ್, ಮಲ್ಲರಾಜು, ಸಂತೋಷ್, ಎಚ್.ಪಿ. ಶಿವಕುಮಾರ್, ನಿತ್ಯಾನಂದ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net