

ಅರಸೀಕೆರೆ ಗ್ರಾಮಾಂತರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶ್ರುತಿ ಮೋಹನ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಗಂಡಸಿ ಜಗದೀಶ್ ನಿಧನದಿಂದ ತೆರವಾದ ಸ್ಥಾನಕ್ಕೆ ಸರ್ವ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಂಘದ ಗೌರವ ಅಧ್ಯಕ್ಷ ಕೆ.ಎಚ್.ಪುಟ್ಟಸ್ವಾಮಿ, ನಿರ್ದೇಶಕರಾದ ಎ.ರಂಗಸ್ವಾಮಿ, ಸಿ.ಕೆ.ಗುರುಮೂರ್ತಿ, ಎಸ್.ಆರ್.ಚಂದ್ರಶೇಖರ್, ಟಿ.ಕೆ.ಹಾಲಪ್ಪ, ನವೀನ್ ಕುಮಾರ್, ಧರ್ಮಶೇಖರ್, ಮಂಜೇಶ್, ನಾಗರಾಜ, ಎ.ಎಸ್.ಕಮಲಾ ಯೋಗೀಶ್, ಸುಗುಣ ಶಂಕರ್, ಸಿಬ್ಬಂದಿ ಎಚ್.ಆರ್.ಹೇಮಾ, ಸಿದ್ದಪ್ಪ, ನಗರಸಭಾ ಸದಸ್ಯರಾದ ಅವಿನಾಶ್, ಕುರುಬ ಸಮಾಜದ ಮುಖಂಡ ಮಧು, ಮಹೇಂದ್ರ ಇತರರು ಇದ್ದರು.