ಇಂದು ಮಹಾರುದ್ರಾಭಿಷೇಕ, ಲಘು ರುದ್ರ ಸ್ವಾಹಾಕಾರ

VMS 3-3
Published on

ವಿಜಯಪುರ: ಭವರೋಗ ವೈದ್ಯರೆಂದೇ ಪ್ರಖ್ಯಾತರಾದ ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ 310ನೇ ಆರಾಧನಾ ಉತ್ಸವವು ಮಾ.7 ಹಾಗೂ 8 ರಂದು ನಡೆಯಲಿದೆ.
ಅದರಂಗವಾಗಿ ಮಾ.4 ಹಾಗೂ 5 ರಂದು ವೈದಿಕ ವೃಂದದಿಂದ ಮಹಾರುದ್ರಾಭಿಷೇಕ, ಲಘು ರುದ್ರ ಸ್ವಾಹಾಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.6 ರಂದು ಬೆಳಗ್ಗೆ 7.30 ರಿಂದ 10.30 ರವರೆಗೆ ಗುಜ್ಜರಗಲ್ಲಿ ವಿಠಲ ಮಂದಿರದಿಂದ ದೀವಟಗೇರಿ ಗಲ್ಲಿಯ ಆದರ್ಶ ಬ್ರಾಹ್ಮಣ ವಿದ್ಯಾರ್ಥಿನಿಲಯದವರೆಗೆ ಸದ್ಗುರು ರುಕ್ಮಾಂಗದರ ಪಾಲಕಿ ಸೇವೆ ನಡೆಯಲಿದೆ.
ಮಾ.7 ರಂದು ಬೆಳಗ್ಗೆ 5 ರಿಂದ 6 ರವರೆಗೆ ಸುಪ್ರಭಾತ, ಮಂಗಲವಾದ್ಯ, 6 ರಿಂದ 7 ರವರೆಗೆ ದೇವತಾರ್ಚನೆ, 7 ರಿಂದ 11.30 ರವರೆಗೆ ಮಹಾಭಿಷೇಕ, ಭಕ್ತಿ ಸಂಗೀತ, ಶ್ರೀಗುರು ಮಂಡಲ ಪೂಜೆ, ನೈವೇದ್ಯ, ಆರತಿ ಜರುಗಲಿದೆ.
ಮಧ್ಯಾಹ್ನ 11.30 ರಿಂದ 1 ಗಂಟೆವರೆಗೆ ಶಾರದಾ ಮಹಿಳಾ ಮಂಡಳಿಯಿಂದ ಲಲಿತಾಸಹಸ್ರನಾಮ ಪಠಣ, ಪ್ರವಚನ ಜರುಗಲಿವೆ. 1ರಿಂದ 3 ರವರೆಗೆ ಮಹಾಪ್ರಸಾದ ವಿತರಣೆ. ಮಧ್ಯಾಹ್ನ 3 ರಿಂದ 5 ರವರೆಗೆ ಶಿವರಾಮ ಗಾಂವಕರ್ ಅವರಿಂದ ಕೀರ್ತನೆ ನಡೆಯಲಿದೆ. ಸಂಜೆ 5 ರಿಂದ ರಾತ್ರಿ 9 ಗಂಟೆವರೆಗೆ ಸ್ಥಳೀಯ ಸಂಗೀತಕಾರರ ಸೇವೆ ಮತ್ತು ಭಜನೆ ಜರುಗಲಿವೆ. ಮಾ.8 ರಂದು ಬೆಳಗ್ಗೆ 5 ರಿಂದ 6 ರವರೆಗೆ ಸುಪ್ರಭಾತ, ಮಂಗಲವಾದ್ಯ, 6 ರಿಂದ 7 ರವರೆಗೆ ದೇವತಾರ್ಚನೆ, 7 ರಿಂದ 9 ರ ವರೆಗೆ ಅಭಿಷೇಕ ಹಾಗೂ ಮಂಗಳಾರತಿ ಜರುಗಲಿವೆ. 9 ರಿಂದ 10 ಗಂಟೆವರೆಗೆ ವಿಜಯಪುರದ ಚಂದ್ರಿಕಾ ಭಜನಾ ಮಂಡಳಿಯಿಂದ ಭಜನೆ, 10 ರಿಂದ ಮಧ್ಯಾಹ್ನ 12ರವರೆಗೆ ಮಹಿಳಾ ವಿವಿ ಪ್ರಾಧ್ಯಾಪಕ ಹರೀಶ ಹೆಗಡೆ ಅವರಿಂದ ಸಂಗೀತಸೇವೆ ನಡೆಯಲಿದೆ. 12 ರಿಂದ 2 ರವರೆಗೆ ಶಿವರಾಮ ಗಾಂವಕರ್ ಅವರಿಂದ ಕೀರ್ತನೆ ನಡೆಯಲಿದೆ. 1ರಿಂದ 3 ರವರೆಗೆ ಗೋಪಾಳಕಾಲಾ, ಅವಭೃತಸ್ನಾನ, ಆರತಿ, ನೈವೇದ್ಯ ಹಾಗೂ ಮಂತ್ರಪುಷ್ಪ ಜರುಗಲಿದೆ. ಬಳಿಕ 3 ರಿಂದ 5 ಗಂಟೆವರೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ ಭಕ್ತಿಗೀತೆಗಳ ಗಾಯನ ಜರುಗಲಿದೆ.

ಉಚಿತ ಆರೋಗ್ಯ ತಪಾಸಣೆ ಶಿಬಿರ

ಮಾ.7 ರಂದು ಮಧ್ಯಾಹ್ನ 1ರಿಂದ ಹಾಗೂ ಮಾ.8ರಂದು ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ಕೊಲ್ಹಾಪುರದ ಶ್ರೀ ಸದ್ಗುರು ವಿಶ್ವನಾಥ ಮಹಾರಾಜ ರುಕಡಿಕರ ಟ್ರಸ್ಟ್‌ನಿಂದ ಉಚಿತ ಆಯುರ್ವೇದ ವೈದ್ಯಕೀಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಮಾ.8ರಂದು ವಿಜಯಪುರದ ನೇತ್ರ ತಜ್ಞ ಡಾ.ಗುರುರಾಜ ಕುಲಕರ್ಣಿ ಅವರಿಂದ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಅರುಣ ಸೋಲಾಪುಕರ (94481 39508) ಅಥವಾ ಅಚ್ಯುತ ಚೈನಿ ಅರ್ಚಕರು ( 98454 06337) ಅವರನ್ನು ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net