ಗುಟಕಾ ಜಾಹೀರಾತು ತೆರವುಗೋಳಿಸುವಂತೆ ಆಗ್ರಹಿಸಿ ಶ್ರೀರಾಮ ಸೇನಾ ಮನವಿ

23GDG04
Published on

ಗದಗ:
ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಿರುವ ಗುಟಕಾ ಜಾಹೀರಾತು ಅಳವಡಿಸಿ ಸಾರ್ವಜನಿಕರನ್ನು ಗುಟಕಾ ಸೇವನೆಗೆ ಪ್ರಚೋದಿಸುತ್ತಿರುವುದನ್ನು ವಿರೋಧಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಶುಕ್ರವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕೂಡಲೇ ಜಾಹೀರಾತು ಲಕಗಳನ್ನು ತೆರವುಗೋಳಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯ ಕಾರ್ಯದಶಿರ್ ರಾಜೂ ಖಾನಪ್ಪನವರ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಲ ಗಂಗಾಧರನಾಥ ಟಿಳಕರು ಆಂಗ್ಲರ ವಿರುದ್ಧ ಜನರನ್ನು ಸಂಟಿಸಲು ಪ್ರಾರಂಭಿಸಿದ ಗಣೇಶೋತ್ಸವ ಜಿಲ್ಲೆಯಲ್ಲಿ ಅತ್ಯಂತ ವಿಜ್ರಂಭಣೆಯಿಂದ ನಡೆಯುತ್ತಿದೆ. ಅವಳಿ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಗುಟಕಾ ಕಂಪನಿಗಳ ಜಾಹೀರಾತು ರಾರಾಜಿಸುತ್ತಿವೆ. ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶನ ದರ್ಶನ ಪಡೆಯಲು ಆಗಮಿಸುವ ಭಕ್ತರು ಗುಟಕಾ ಕಂಪನಿಗಳ ಉತ್ಪನ್ನಗಳನ್ನು ಸೇವಿಸುವಂತೆ ಪ್ರಚೋದಿಸುವ ಜಾಹೀರಾತು ಪ್ರಕಟಿಸಲಾಗಿದೆ. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಹಾಗೂ ಗುಟಕಾ ಕಂಪನಿಗಳ ಕ್ರಮ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದೆಯೆಂದು ಆರೋಪಿಸಿದರು.
ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಗುಟಕಾ ಕಂಪನಿಗಳು ತಲಾ ಹತ್ತು ಸಾವಿರ ರೂಪಾಯಿಗಳ ದೇಣಿಗೆಯನ್ನು ನೀಡಿದೆ. ಹತ್ತು ಸಾವಿರ ರೂಪಾಯಿಗಳ ದೇಣಿಗೆಗೆ ಪ್ರತಿಯಾಗಿ ಗಣೇಶೋತ್ಸವ ಮಂಡಳಿಗಳಿಗೆ ಗುಟಕಾ ಕಂಪನಿಗಳು ಪ್ರಚಾರದ ್ಲೆಕ್ಸ್​ಗಳನ್ನು ಶಾಮಿಯಾನದ ಮೂರೂ ದಿಕ್ಕಿನಲ್ಲಿ ಅಳವಡಿಸಬೇಕು. ಗಣೇಶನ ಮೂತಿರ್ ಪ್ರತಿಷ್ಠಾಪಿಸಿದ ಹಿಂದಿನ ಸ್ಥಳದಲ್ಲಿ ಗುಟಕಾ ಕಂಪನಿಯ ಎಲ್​ಇಡಿ ಸ್ಕ್ರೀನ್​ ಅಳವಡಿಸುವ ಕರಾರು ವಿಧಿಸಿದೆ. ಈ ಕ್ರಮದ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಅನ್ನರ್ಪೂಣ ಮುದಕಮ್ಮನವರ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಚಚಿರ್ಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯ ಸೋಮು ಗುಡಿ, ಶಿವಯೋಗಿ ಹಿರೇಮಠ, ಕಿರಣ ಹಿರೇಮಠ, ವೆಂಕಟೇಶ ದೊಡ್ಡಮನಿ, ಸತೀಶ ಕುಂಬಾರ, ಗುರುರಾಜ ಮರಾಠಿ, ಶಶಿಧರ ಗಟ್ಟಿ, ರಮೇಶ ಹಲಗಿ, ಶಿವಕುಮಾರ ಕೊರ್ಲಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net