

ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯ, ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಟೂರಿಸಂ ಹಾಗೂ
ಇಂಟೀರಿಯರ್ ಡಿಸೈನ್ ವಿಭಾಗದ ವತಿಯಿಂದ ಪಾಂಡೇಶ್ವರದ ಶ್ರೀನಿವಾಸ ಸಿಟಿ ಕ್ಯಾಂಪಸ್‌ನಲ್ಲಿ ಮಂಗಳವಾರ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಓಣಂ ಹಬ್ಬದ ಆಚರಿಸಲಾಯಿತು.
ಶ್ರೀೀನಿವಾಸ ವಿವಿ ಉಪಕುಲಪತಿ ಡಾ.ಪಿ.ಎಸ್.ಐತಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಟೂರಿಸಂನ ಡೀನ್ ಪ್ರೊ. ಸ್ವಾಮಿನಾಥನ್.ಎಸ್. , ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಾಮರ್ಸ್‌ನ ಡೀನ್ ಪ್ರೊ..ವೆಂಕಟೇಶ್ ಅಮೀನ್, ವಿವಿಧ ವಿಭಾಗದ ಡೀನ್‌ಗಳಾದ ಡಾ. ಸೋನಿಯಾ ನೊರೊನ್ಹಾ, ಡಾ. ಪದ್ಮನಾಭ, ಡಾ. ರಾಜಶೇಖರ್, ಬಿಎಚ್‌ಎಂ ಕೋರ್ಸ್ ಸಂಯೋಜಕ ಪ್ರೊ.ಪ್ರಶಾಂತ್ ಪ್ರಭು , ಪ್ರೊ.ಯೋಗೀತಾ ಪೈ, ಪ್ರೊ. ಪದ್ಮನಾಭ, ಪ್ರೊ.
ಪ್ರಿಯಾಂಕಾ ಪ್ರಭು ಉಪಸ್ಥಿತರಿದ್ದರು.
ಹಬ್ಬದ ವಿಶೇಷ ಆಕರ್ಷಣೆಯಾಗಿ ಸಾಂಪ್ರದಾಯಿಕ ಆಹಾರ, ಹುಲಿ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಪೂಕಳಂ, ಮಡಕೆ ಒಡೆಯುವುದು ಹಾಗೂ ಮನರಂಜನಾ ಸ್ಪರ್ಧೆಗಳು ನಡೆದವು.