

ಮಂಗಳೂರು : ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 25ನೇ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು 4 ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಜಯಿಸಿ ಪುರುಷರ ವಿಭಾಗದಲ್ಲಿ ರನ್ನರ್ ಅಪ್ ಟ್ರೋಫಿ ಗೆದ್ದಿದ್ದಾರೆ.
ಪ್ರತಿಭಾವಂತ ಕ್ರೀಡಾಪಟು ಸಂಜಯ ಕುಮಾರ್ 800 ಮೀ. ಮತು 1500 ಮೀಟರ್ ಓಟ ಮತ್ತು ಚಿನ್ನದ ಪದಕ ಗೆದ್ದರು.
ಅಕ್ಷಯ್ ಇವರು 5000 ಮೀ ಹಾಗೂ 21000 ಮೀ. ಓಟದಲ್ಲಿ ಬೆಳ್ಳಿ ಪದಕ ಮತ್ತು 10000 ಮೀ. ಓಟದಲ್ಲಿ ಕಂಚಿನ ಪದಕ,
ಸೂದೀಪ್ .ಎನ್.ನಾಯ್ಕ ಇವರು 100 ಮೀ.ಹಾಗೂ 200 ಮೀ.ಓಟಗಳಲ್ಲಿ ಬೆಳ್ಳಿ ಪದಕ, ಗೌತಮ್ ಜಾವೆಲಿನ್ ತ್ರೋದಲ್ಲಿ ಚಿನ್ನ,
ಋಷಬ್ ಕುಮಾರ್ ಶಾಟ್‌ಪುಟ್‌ನಲ್ಲಿ ಬೆಳ್ಳಿ ಮತ್ತು ಡಿಸ್ಕಸ್ ಥ್ರೋದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸಂಜಯ ಕುಮಾರ್, ಅಕ್ಷಯ್ , ಸೂದೀಪ್ ಎನ್ ನಾಯ್ಕ್ ಮತ್ತು ಋಷಬ್ ಕುಮಾರ್ ಇವರುಗಳನ್ನು ಒಳಗೊಂಡ ತಂಡ 4 * 400 ಮೀಟರ್ ರಿಲೇಯಲ್ಲಿ ಚಿನ್ನ ಗೆದ್ದಿದೆ.
ಪದಕ ಗೆದ್ದ ಕ್ರೀಡಾಪಟುಗಳನ್ನು ಪ್ರಾಂಶುಪಾಲ ಡಾ.ಶ್ರೀನಿವಾಸ ಮಯ್ಯ ಡಿ, ಕ್ರೀಡಾ ಸಂಯೋಜಕ ಡಾ. ಧೀರಜ್ ಹೆಬ್ರಿ, ಶಾರೀರಿಕ ನಿರ್ದೇಶಕರಾದ ಪ್ರಣಾಮ್ ಶೆಟ್ಟಿ ಮತ್ತು ಸುಪ್ರಿಯಾ ಅಡಿಗ ಅಭಿನಂದಿಸಿದ್ದಾರೆ.