ಶ್ರೀನಿವಾಸ ವಿಶ್ವವಿದ್ಯಾಲಯದ ಏಳನೇ ವಾರ್ಷಿಕ ಘಟಿಕೋತ್ಸವ

mng-13feb-shrinivas
Published on


ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯದ ಏಳನೇ ವಾರ್ಷಿಕ ಘಟಿಕೋತ್ಸವ ಶ್ರೀನಿವಾಸ ವಿಶ್ವವಿದ್ಯಾಲಯ ಮುಕ್ಕ ಕ್ಯಾಂಪಸ್‌ನಲ್ಲಿ ಗುರುವಾರ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪ್ರೊ.ಪಿ.ಎಲ್. ಧರ್ಮ ಮಾತನಾಡಿ ‘ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಯಶಸ್ಸನ್ನು ಹೊಂದಲು ಸಾಧ್ಯ. ಹೆತ್ತವರಿಗೆ ಗೌರವ ನೀಡುವುದು, ಸಮಾಜದಲ್ಲಿ ಉತ್ತಮ ಬದಲಾವಣೆ ಮಾಡುವುದು, ಕೌಶಲ ಹೆಚ್ಚಿಸುವುದು, ದೈಹಿಕವಾಗಿ ಸದೃಢರಾಗುವುದು, ನವೀನ ವಿಧಾನಗಳೊಂದಿಗೆ ಪರಿಸರಕ್ಕೆ ಕೊಡುಗೆ ನೀಡುವುದು, ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನವನ್ನು ಹೆಚ್ಚಿಸುವುದು ಉತ್ತಮ ಮೌಲ್ಯಗಳಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸಿಎ. ಎ. ರಾಘವೇಂದ್ರ ರಾವ್ ಮಾತನಾಡಿ
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಎಲ್ಲ ರೀತಿಯ ಆಧುನಿಕ ಶೈಕ್ಷಣಿಕ ಬೆಂಬಲ ಮತ್ತು ಸೌಲಭ್ಯಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೊಡ್ಡ ಕನಸುಗಳನ್ನು ಹೊಂದಬೇಕು ಮತ್ತು ಆ ಕನಸುಗಳನ್ನು ನನಸಾಗಿಸುವಲ್ಲಿ ಗುರಿಗಳನ್ನು ಹೊಂದಬೇಕು ಎಂದರು.
ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಪದವೀಧರರಿಗೆ ವೃತ್ತಿಪರ ಮತ್ತು ನೈತಿಕ ಪ್ರತಿಜ್ಞಾ ವಿಧಿ ಬೋಧಿಸಿದರು.
ಪದವೀಧರರು ಅಹಂಕಾರವಿಲ್ಲದೆ ಜೀವನದಲ್ಲಿ ಬೆಳೆಯಬೇಕು ಮತ್ತು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಪಡೆಯಲು ಏಕಾಗ್ರತೆಯಿಂದ ಸತತವಾಗಿ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.
ಶ್ರೀನಿವಾಸ ವಿವಿ ಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ ವಾರ್ಷಿಕ ವರದಿ ಮಂಡಿಸಿದರು. ಸಂಸ್ಥೆಯ ಟ್ರಸ್ಟಿಗಳಾದ ವಿಜಯಲಕ್ಷ್ಮಿ.ಆರ್.ರಾವ್, ಮಿತ್ರ .ಎಸ್.ರಾವ್, ರಿಜಿಸ್ಟ್ರಾರ್‌ಗಳಾದ ಡಾ. ಅಜಯ್ ಕುಮಾರ್, ಡಾ. ಆದಿತ್ಯ ಕುಮಾರ್ ಮಯ್ಯ ಹಾಗೂ ವಿಶ್ವವಿದ್ಯಾಲಯದ ವಿವಿಧ ಸಂಸ್ಥೆಗಳ ಡೀನ್‌ಗಳು ಉಪಸ್ಥಿತರಿದ್ದರು.
ಘಟಿಕೋತ್ಸವದದಲ್ಲಿ, 2233 ಪದವೀಧರರು (ಪಿಜಿ - 645, ಯುಜಿ - 1588) ಪ್ರಮಾಣ ಪತ್ರ ಹಾಗೂ 46 ಪದವೀಧರರು ಕುಲಪತಿಗಳ ಚಿನ್ನದ ಪದಕ ಪಡೆದರು. 64 ಮಂದಿಗೆ ಪಿಎಚ್ ಡಿ ಪದವಿ ನೀಡಲಾಯಿತು. ಶ್ರೀನಿವಾಸ ವಿವಿ ಕುಲಸಚಿವ ಡಾ.ಅನಿಲ್ಕುಮಾರ್ ಸ್ವಾಗತಿಸಿ, ಮೌಲ್ಯಮಾಪನ ಕುಲಸಚಿವ ಡಾ.ಶ್ರೀನಿವಾಸ್ ಮಯ್ಯ ಡಿ ವಂದಿಸಿದರು. ಡಾ.ಅಂಬಿಕಾ ಮಲ್ಯ, ಡಾ.ವಿಜಯಲಕ್ಷ್ಮಿ ನಾಯಕ್ ಮತ್ತು ಪ್ರೊ.ರೋಹನ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net