ಫೆ.21 ಮತ್ತು 22 ರಂದು ಶ್ರೀನಿವಾಸ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಶ್ರೀನಿವಾಸ ಪ್ರತಿಷ್ಠಾ ಮಹೋತ್ಸವ

sssssssss
Published on



ಮಂಗಳೂರು : ನಗರದ ಹೊರವಲಯದ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಫೆ.21 ಮತ್ತು 22 ರಂದು ಶ್ರೀನಿವಾಸ ಪ್ರತಿಷ್ಠಾ ಮಹೋತ್ಸವ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಲಿದೆ.
ಶ್ರೀನಿವಾಸ ವಿವಿಯ ಕ್ಯಾಂಪಸ್ ಒಳಗೆ ನೂತನ ದೇವಾಲಯದಲ್ಲಿ ಶ್ರೀನಿವಾಸ ದೇವರ ಪ್ರತಿಷ್ಠಾ ಮಹೋತ್ಸವ ೆ.21ರಂದು
ಆರಂಭವಾಗಲಿದೆ. ೆ.22ರಂದು ಮಹಾಮಸ್ತಕಾಭಿಷೇಕ ಹಾಗೂ ಭವ್ಯ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.
ದೇವಾಲಯವನ್ನು ವಳಚ್ಚಿಲ್‌ನ ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದೆ. ಶ್ರೀನಿವಾಸ ದೇವರ ಮೂರ್ತಿಯನ್ನು
ತಿರುಪತಿಯಿಂದಲೇ ತರಲಾಗಿದೆ ಎಂದು ಶ್ರೀನಿವಾಸ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ.ರಾಘವೇಂದ್ರ ರಾವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ೆ.21ರಂದು ಬೆಳಗ್ಗೆ 9.30ರಿಂದ ಲಕ್ಷ್ಮೀನಾರಾಯಣ ಹೋಮ, ವಾಯುಸ್ತುತಿ ಪುನಶ್ಚರಣ ಹವನ, ಶಾಂತಿ ಪ್ರಾಯಶ್ಚಿತ್ತ ಹೋಮಗಳು, ವಿಷ್ಣು ಸಹಸ್ರ ನಾಮಾವಳಿ, ಪಾರಾಯಣ ಸಹಿತ ಶಾಸ್ರೋಕ್ತ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಸಾಯಂಕಾಲ 4.30ಕ್ಕೆ ಶ್ರೀನಿವಾಸ ದೇವರ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ಸಾಂಪ್ರದಾಯಿಕ ಆಚರಣೆಗಳಾದ ಅಧಿವಾಸಹೋಮ ಮತ್ತು ಶಯ್ಯದಿವಾಸ ಕಲಶ ಮಂಡಲ ಸೇವೆ ನಡೆಯಲಿದೆ .
ೆ.22ರಂದು ಮುಂಜಾನೆ ಗಣಹೋಮ, ಪ್ರತಿಷ್ಠಾ ಪ್ರಸನ್ನ ಪೂಜೆ, 7:40ಕ್ಕೆ ನಡೆಯುವ ಪ್ರತಿಷ್ಠಾ ಸಮಾರಂಭವು ಪ್ರಮುಖ ಅಂಶವಾಗಿದೆ. ಕಲಶಾಭಿಷೇಕ, ವಿಷ್ಣು ಸಹಸ್ರ ನಾಮ ಹವನ, ಕಲ್ಪೋಕ್ತ ಪೂಜೆ, ದಂಪತಿ ಪೂಜೆ, ಮಂತ್ರಾಕ್ಷತೆ ಮತ್ತು ಸಂತರ್ಪಣೆ ನಡೆಯಲಿದೆ. ಸಾಯಂಕಾಲ 4.30ರಿಂದ ಶ್ರೀನಿವಾಸ ಕಲ್ಯಾಣೋತ್ಸವವು ಗೋಧೂಳಿ ಲಗ್ನದಲ್ಲಿ ನಡೆದು ರಾತ್ರಿಯವರೆಗೂ ಮುಂದುವರಿಯಲಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ನಂತರದ ದಿನಗಳಲ್ಲಿ ನಿತ್ಯವೂ ದೇವರಿಗೆ ಪೂಜೆ ನೆರವೇರಲಿದ್ದು, ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ದೇವರ ದರ್ಶನ ಪಡೆಯಬಹುದು ಎಂದು ಡಾ.ರಾಘವೇಂದ್ರ ರಾವ್ ವಿವರ ನೀಡಿದರು.
ಶ್ರೀನಿವಾಸ ಸಮೂಹ ಸಂಸ್ಥೆ ಉಪಾಧ್ಯಕ್ಷ ಡಾ.ಎ.ಶ್ರೀನಿವಾಸ ರಾವ್, ರಿಜಿಸ್ಟ್ರಾರ್‌ಗಳಾದ ಡಾ.ಅನಿಲ್ ಕುಮಾರ್, ಡಾ.ಶ್ರೀನಿವಾಸ್ ಮಯ್ಯ ಡಿ., ಡಾ.ಅಜಯ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net