ಫೆ.10ರಂದು ಶ್ರೀನಿವಾಸ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ

sssssssss
Published on




ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯದ 6ನೇ ವಾರ್ಷಿಕ ಘಟಿಕೋತ್ಸವ ಫೆ.10ರಂದು ಬೆಳಗ್ಗೆ 9.30ಕ್ಕೆ ಸುರತ್ಕಲ್ ಮುಕ್ಕದಲ್ಲಿರುವ ಶ್ರೀನಿವಾಸ ವಿ.ವಿ.ಕ್ಯಾಂಪಸ್‌ನಲ್ಲಿ ನಡೆಯಲಿದೆ. ಎಂಸಿಎಫ್‌ನ ಸೀನಿಯರ್ ಜನರಲ್ ಮ್ಯಾನೇಜರ್ ಡಾ. ಕೆ. ಯೋಗೀಶ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ.
ಘಟಿಕೋತ್ಸವದಲ್ಲಿ 1257 ಪದವೀಧರರು ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ. ವಿಶ್ವವಿದ್ಯಾಲಯವು 144 ರ‌್ಯಾಂಕ್ ಪ್ರಕಟಿಸಿದ್ದು,್ತ 38 ಪದವೀಧರರು ಕುಲಾಧಿಪತಿಗಳ ಚಿನ್ನದ ಪದಕ ಸ್ವೀಕರಿಸಲಿದ್ದಾರೆ. 1ಡಿ.ಎಸ್‌ಸಿ ಹಾಗೂ 17 ಪಿಎಚ್ ಡಿ ಪದವಿ ನೀಡಲಾಗುವುದು ಎಂದು ಶ್ರೀನಿವಾಸ್ ವಿವಿಯ ರಿಜಿಸ್ಟ್ರಾರ್ ಡಾ.ಅನಿಲ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಪದವಿ ಪ್ರದಾನ ಕಾರ್ಯಕ್ರಮ ಫೆ.11ರಂದು ಬೆಳಗ್ಗೆ 9.30ಕ್ಕೆ ಮುಕ್ಕ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಕೇಂದ್ರ ಸರ್ಕಾರದ ಸಲಹೆಗಾರ ಡಾ. ಸುಹಾಸ್ ಗೋಪಿನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 1510 ಪದವೀಧರರು ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ. ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಫೆ.14ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಕಾರ್ಯನಿರ್ವಾಹಕ ನಿರ್ದೇಶಕ ಆಶೀಶ್ ಪಾಂಡೆ ಸಂಸ್ಥಾಪಕರ ದಿನದ ಮುಖ್ಯ ಭಾಷಣ ಮಾಡಲಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಯು. ಟಿ.ಇಫ್ತಿಕರ್ ಅಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀನಿವಾಸ ವಿ.ವಿ.ಯ ಕುಲಾಧಿಪತಿ ಡಾ.ಸಿಎ ಎ ರಾಘವೇಂದ್ರ ರಾವ್ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಲಿದ್ದಾರೆ. ಸಹ ಕುಲಾಧಿಪತಿ ಡಾ.ಎ.ಶ್ರೀನಿವಾಸ ರಾವ್, ಆಡಳಿತ ಮಂಡಳಿ ಸದಸ್ಯರಾದ ವಿಜಯಲಲಕ್ಷ್ಮಿ.ಆರ್.ರಾವ್, ಮಿತ್ರಾ ಎಸ್.ರಾವ್, ಪದ್ಮಿನಿ ಕುಮಾರ್ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ವಿವಿಯ ರಿಜಿಸ್ಟ್ರಾರ್‌ಗಳಾದ ಡಾ. ಶ್ರೀನಿವಾಸ ಮಯ್ಯ , ಡಾ.ಅಜಯ ಕುಮಾರ್,ಡಾ.ರಾಮಕೃಷ್ಣ ಉಪಸ್ಥಿತರಿದ್ದರು

---ಬಾಕ್ಸ್ ----
ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ
ಸಂಸ್ಥಾಪಕರ ದಿನಾಚರಣೆಯ ಸಂದರ್ಭ ಎ.ಶಾಮ ರಾವ್ ಪ್ರತಿಷ್ಠಾನದ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದವರ ವಿವರ
* ಎ. ಶಾಮರಾವ್ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ - 24
ಪಿ.ಯು.ವಿಭಾಗ : ಡಾ. ಪ್ರಸನ್ನ ಕುಮಾರ್ ಐತಾಳ್ ಸಂಸ್ಕೃತ ಉಪನ್ಯಾಸಕರು, ಎಸ್‌ಡಿಎಂ ಪಿಯು ಕಾಲೇಜು, ಉಜಿರೆ
ಪ್ರೌಢಶಾಲೆ ವಿಭಾಗ : ರವಿ ಅಲೆವೂರಾಯ ವರ್ಕಾಡಿ
* ಎ.ಶಾಮರಾವ್ ಸ್ಮಾರಕ ಅತ್ಯುತ್ತಮ ಸಾಧನೆ ಪ್ರಶಸ್ತಿ-24
ಸತೀಶ್ ಶೆಟ್ಟಿ ಪಟ್ಲ -ಯಕ್ಷಗಾನ ಕ್ಷೇತ್ರ ,
ವಲೇರಿಯನ್ ಸಲ್ಡಾನಾ- ಜೋತಿಷ್ಯ ಶಾಸ್ತ್ರ ಕ್ಷೇತ್ರ
ಸುಲೋಚನಾ ವಿ. ಭಟ್ -ನೃತ್ಯ ಕ್ಷೇತ್ರ
ವಿದ್ವಾನ್ ಪಂಜ ಭಾಸ್ಕರ ಭಟ್- ಪೌರೋಹಿತ್ಯ ಮತ್ತು ಜೋತಿಷ್ಯ ಕ್ಷೇತ್ರ
ದಾಮೋದರ್ ಆಚಾರ್ಯ -ಛಾಯಾಗ್ರಹಣ ಕ್ಷೇತ್ರ
ವಾಸುದೇವ ಇಡ್ಯೋಡಿ -ಸಮಾಜ ಸೇವೆ
ವಿದ್ವಾನ್ ರಾಜೇಶ್ ರಾವ್ ಬಾಗ್ಲೋಡಿ -ಕೊಳಲು ವಾದಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net