‘ಇನ್ನೋವೇಟಿವ್ ಪ್ರಾಕ್ಟೀಸಸ್ ಮತ್ತು ಪೇಶಿಯಂಟ್ ಸೇಫ್ಟಿ‘ ರಾಷ್ಟ್ರೀಯ ವಿಚಾರ ಸಂಕಿರಣ

mng-4apri-shrinivas Conference
Published on



ಮಂಗಳೂರು : ವಳಚ್ಚಿಲ್‌ನ ಶ್ರೀನಿವಾಸ ಫಾರ್ಮಸಿ ಕಾಲೇಜ್‌ನಲ್ಲಿ ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್, ದ.ಕ.ಘಟಕದ ಸಹಯೋಗದಲ್ಲಿ ‘ಇನ್ನೋವೇಟಿವ್ ಪ್ರಾಕ್ಟೀಸಸ್ ಮತ್ತು ಪೇಶಿಯಂಟ್ ಸೇಫ್ಟಿ‘ ವಿಷಯದ ಬಗ್ಗೆ 7ನೇ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.
ವಿಚಾರ ಸಂಕಿರಣ ಉದ್ಘಾಟಿಸಿದ ವಸುಧ ಲೈಫ್ ಸೈನ್ಸಸ್‌ನ ವ್ಯವಸ್ಥಾಪಕ ನಿರ್ದೇಶಕ ದಿನೇಶ್‌ಚಂದ್ರ ಎ ಹೆಗ್ಡೆ ಮಾತನಾಡಿ ‘ ಕಳೆದ ಹತ್ತು
ವರ್ಷಗಳಲ್ಲಿ ಭಾರತೀಯ ಔಷಧ ಕ್ಷೇತ್ರದಲ್ಲಿ ಗಣನೀಯ ಆರ್ಥಿಕ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಭಾರತೀಯ ಔಷಧ ತಂತ್ರಜ್ಞರ ಪರಿಣಾಮಕಾರಿಯಾದ ಸಂಶೋಧನೆಗಳು ಮತ್ತು ಕನಿಷ್ಠ ಅಡ್ಡ ಪರಿಣಾಮಗಳು ಒಳಗೊಂಡ ಔಷಧ ತಯಾರಿಕೆಗಳು ಇದಕ್ಕೆ ಮುಖ್ಯ ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿ.ವಿ.ಯ ಕುಲಾಧಿಪತಿ ಡಾ.ಸಿಎ ಎ.ರಾಘವೇಂದ್ರ ರಾವ್ ಮಾತನಾಡಿ ‘ ರೋಗಿಗಳ ಸುರಕ್ಷತೆಯು ಸುರಕ್ಷಿತ ಔಷಧಗಳು ಮತ್ತು ಅವುಗಳ ಮುನ್ನೆಚ್ಚರಿಕೆಯ ಬಳಕೆಯಿಂದ ಪ್ರಾರಂಭವಾಗುತ್ತದೆ’ ಎಂದರು. ಮುಖ್ಯ ಅತಿಥಿಯಾಗಿದ್ದ ಶ್ರೀನಿವಾಸ ವಿ.ವಿ.ಯ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಮಾತನಾಡಿ ಔಷಧ ವಿದ್ಯಾರ್ಥಿಗಳು ನಿರಂತರವಾಗಿ
ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನ ಅಸೋಸಿಯೇಟ್ ಪ್ರೊಫೆಸರ್ ಡಾ.ವಿಜಯನಾರಾಯಣ,
ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿಯ ಪ್ರೊಫೆಸರ್ ಡಾ. ಇ.ವಿ.ಎಸ್. ಸುಬ್ರಹ್ಮಣ್ಯಂ, ಡಾ.ಕೃಷ್ಣಾನಂದ ಕಾಮತ್ ಉಪಸ್ಥಿತರಿದ್ದರು.
ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ.ಎ.ಆರ್. ಶಬರಾಯ ಸ್ವಾಗತಿಸಿದರು. ಡಾ.ಪದ್ಮಾವತಿ ಪಿ ಪ್ರಭು, ಜೋಸ್‌ಲಿನ್, ಜೆಸಿಕಾ ಮತ್ತು ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ವಿಚಾರ ಸಂಕಿರಣದಲ್ಲಿ ಫಾರ್ಮಸಿ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಸಂಶೋಧನಾ ಪತ್ರಗಳನ್ನು ಮಂಡಿಸಿದರು. 550ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net