

ಮಂಗಳೂರು : ಸ್ವಾತಂತ್ರೃ ಹೋರಾಟಗಾರ , ಮಾಜಿ ಸಂಸದ ದಿ.ಉಳ್ಳಾಲ ಶ್ರೀನಿವಾಸ ಅವರ ಜನ್ಮ ದಿನಾಚರಣೆ ಅಂಗವಾಗಿ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಘಟಕದ ವತಿಯಿಂದ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ‘ದಿ ಮಲ್ಯ ರೆಸಿಡೆನ್ಸ್‘ ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನ ನಡೆಯಿತು.
ಮಲ್ಯ ಅವರು ತಮ್ಮ ಬಾಲ್ಯವನ್ನು ಕಳೆದ ನಗರದ ರಥಬೀದಿಯಲ್ಲಿರುವ ಪೂರ್ವಜರ ಮನೆಯ ವಿವರ ಸಹಿತ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು.
ಇಂಟಾಕ್ ಸದಸ್ಯೆ ಶರ್ವಾಣಿ ಭಟ್ ಅವರು ನಿಖರವಾದ ದಾಖಲಾತಿ ಪ್ರಕ್ರಿಯೆಯನ್ನು ವಿವರಿಸಿದರು. ಗೋವಿಂದ ದಾಸ ಕಾಲೇಜಿನ ಪ್ರೊ.ಪಿ.ಕೃಷ್ಣಮೂರ್ತಿ ಮತ್ತು ಸಂಗೀತಗಾರ ಮಧುಸೂಧನ್ ಕುಮಾರ್ ಅವರು ಆಧುನಿಕ ಮಂಗಳೂರನ್ನು ರೂಪಿಸುವಲ್ಲಿ ಮಲ್ಯ ಅವರ ಪ್ರಮುಖ ಪಾತ್ರವನ್ನು ಸ್ಮರಿಸಿದರು. ಕಸ್ತೂರಿ ಬಾಲಕೃಷ್ಣ ಪೈ ಅವರು ಮಲ್ಯ ಅವರ ಅಂತ್ಯಕ್ರಿಯೆಯ ವೇಳೆ ತಾವು ಸ್ವತಃ ಪ್ರಾರ್ಥಿವ ಶರೀರ ಹೊತ್ತುಕೊಂಡ ನೆನಪನ್ನು ಹಂಚಿಕೊಂಡರು.
ಮಲ್ಯ ಅವರ ಮೊಮ್ಮಗ ನರಹರಿ ಮಲ್ಯ ಅವರು ತಮ್ಮ ಪೂರ್ವಜರ ಪರಂಪರೆಯನ್ನು ಉಳಿಸಿದ್ದಕ್ಕಾಗಿ ಇಂಟಾಕ್‌ಗೆ ಕೃತಜ್ಞತೆ ಸಲ್ಲಿಸಿದರು. ಇಂಟಾಕ್ ಮಂಗಳೂರು ಸಂಚಾಲಕ ಸುಭಾಸ್ ಚಂದ್ರ ಬಸು ಸ್ವಾಗತಿಸಿದತು. ಪ್ರದರ್ಶನವು ನ.24 ರವರೆಗೆ ಬೆಳಗ್ಗೆ 11ರಿಂದ ಸಾಯಂಕಲ 7ರ ವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.