

ಮಂಗಳೂರು : ನಗರದ ಮುಕ್ಕದಲ್ಲಿರುವ ಶ್ರೀನಿವಾಸ ಆಸ್ಪತ್ರೆಯ ಅತ್ಯುತ್ತಮ ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳನ್ನು ಪರಿಗಣಿಸಿ ನ್ಯಾಶನಲ್ ಅಕ್ರೆಡಿಯೇಶನ್ ಬೋರ್ಡ್ ಫರ್ ಹಾಸ್ಪಿಟಲ್ಸ್ (ಎನ್‌ಎಬಿಎಚ್) ಮಾನ್ಯತೆ ಲಭಿಸಿದೆ ಎಂದು ಶ್ರೀನಿವಾಸ ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಅತ್ಯುತ್ತಮ ಸೇವೆಗಳಾದ ಕ್ಯಾಥ್ ಲ್ಯಾಬ್, ಎಂ.ಆರ್.ಐ., ಸಿ. ಟಿ. ಸ್ಕಾೃನ್, ಮ್ಯಾಮೋಗ್ರಾಫಿ, ತುರ್ತು ಸೇವಾ ಕೇಂದ್ರ, ಹೃದಯ ರೋಗ ಚಿಕಿತ್ಸೆ, ಬೆನ್ನು ಹುರಿ ಚಿಕಿತ್ಸೆ, ಮಕ್ಕಳ ಸರ್ಜರಿ, ಇಕೋ, ಟಿಎಂಟಿ ಸೌಲಭ್ಯ, ಸ್ಪೈರೋಮೆಟಿ, ಬ್ರಂಕೋಸ್ಕೋಪಿ, ಇ.ಸಿ.ಜಿ., ನರರೋಗ ಸಂಬಂಧಿತ ಶಸ್ತ್ರಚಿಕಿತ್ಸೆ, ಅಲರ್ಜಿ ಕ್ಲಿನಿಕ್, ಶ್ವಾಸಕೋಶ ಸಂಬಂಧಿ ಚಿಕಿತ್ಸೆ, ಆಂಜಿಯೋಗ್ರಾಮ್ ಮತ್ತು ಆಂಜಿಪ್ಲಾಸ್ಟಿಯೋ, ಮೂತ್ರಪಿಂಡ ಹಾಗೂ ಮೂತ್ರಜನಕಾಂಗ ಸಂಬಂಧಿ ರೋಗ ಚಿಕಿತ್ಸೆ, ಡಯಾಬಿಟಿಕ್ ಕಾಲುಗಳ ಹುಣ್ಣು ತಪಾಸಣೆ, ಲ್ಯಾಪೋಸ್ಕೋಪಿ / ಆರ್ಥೋಸ್ಕೋಪಿ, ಲೇಸರ್ ಚಿಕಿತ್ಸೆ ಮತ್ತು ಅತ್ಯುತ್ತಮ ಸೌಲಭ್ಯಗಳಾದ 24*7 ಔಷಧಿ ಸೌಲಭ್ಯ/ ಲ್ಯಾಬೋರೇಟರಿ, 24*7 ಬ್ಲಡ್ ಬ್ಯಾಂಕ್, ಆಂಬುಲೆನ್ಸ್ ಸೌಲಭ್ಯ, 4ಆ ಅಲ್ಟ್ರಾ ಸೌಂಡ್, ಡಿಜಿಟಲ್ ಎಕ್ಸ್-ರೇ, ಡಯಾಲಿಸಿಸ್, ಎಂಡೋಸ್ಕೋಪಿ, ಅತ್ಯಾಧುನಿಕ ಆಪರೇಷನ್ ಥಿಯೇಟರ್, ನವಜಾತ ಶಿಶು ಆರೈಕೆ, ಸುಸಜ್ಜಿತ ಪ್ರಸೂತಿ ಕೊಠಡಿ, ಬಂಜೆತನ ನಿವಾರಣಾ ಚಿಕಿತ್ಸೆ, ತೀವ್ರ ನಿಗಾ ಘಟಕ, ಫಿಸಿಯೋಥೆರಪಿ ಸೌಲಭ್ಯ ಆಡಿಯೋಮೆಟ್ರಿ, ಕಿವಿ, ಮೂಗು, ಗಂಟಲು ಚಿಕಿತ್ಸೆ, ಪೊಟೋಥೆರಫಿ / ಕ್ರೈಯೋಥೆರಫಿ, 24 ಕಂಪೆನಿಗಳ ಇನ್ಸೂರೆನ್ಸ್ ಸೌಲಭ್ಯ, ಜನರಲ್ ವಾರ್ಡ್, ಸೆಮಿ ಸ್ಪೆಶಲ್, ಪ್ರೈವೇಟ್ ವಾರ್ಡ್, ಡಿಲಕ್ಸ್ ವಾರ್ಡ್ ಸೌಲಭ್ಯವನ್ನು ಆಸ್ಪತ್ರೆ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.