ವೇಣೂರು ಕಂಬಳದಲ್ಲಿ ಶ್ರೀನಿವಾಸ ಗೌಡ ಹೊಸ ದಾಖಲೆ

Srinivas Gowda sets new record in Venoor kambala
srinivas gowda new
Published on

ಮಂಗಳೂರು: ಮಿಜಾರು ಶ್ರೀನಿವಾಸ ಗೌಡ ಮತ್ತೊಮ್ಮೆ ಕಂಬಳದ ವೇಗದ ಓಟಗಾರನಾಗಿ ಹೊರಹೊಮ್ಮಿದ್ದಾರೆ.

ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡ ಸೂರ್ಯ ಚಂದ್ರ ಜೋಡುಕರೆ ಕಂಬಳದಲ್ಲಿ ಅವರು 11.21 ಸೆಕೆಂಡುಗಳಲ್ಲಿ 125 ಮೀಟರ್ ಉದ್ದ ಕರೆಯಲ್ಲಿ ಗುರಿ ಮುಟ್ಟಿದ್ದಾರೆ.

ಇದನ್ನು 100 ಮೀಟರ್‌ಗೆ ಬದಲಾಯಿಸಿದಾಗ 8.96 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ದಾಖಲೆಯಾಗುತ್ತದೆ. ಇದು ಕಂಬಳದಲ್ಲಿ ಇದುವರೆಗಿನ ಅತಿ ವೇಗದ ಓಟ.

ನೇಗಿಲು ಹಿರಿಯ ವಿಭಾಗದ ಚಾನ್ಸ್ ಓಟದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ಕೋಣಗಳನ್ನು ಓಡಿಸುವಾಗ ಈ ದಾಖಲೆ ನಿರ್ಮಾಣವಾಗಿದೆ.

ಐಕಳ ಕಂಬಳದಲ್ಲಿ ಬೈಂದೂರು ವಿಶ್ವನಾಥ ಶೆಟ್ಟಿಯವರು 100 ಮೀ. ದೂರವನ್ನು 9.15 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net