

ಮಂಗಳೂರು : ಮುಕ್ಕದಲ್ಲಿರುವ ಶ್ರೀನಿವಾಸ್ ಯುನಿವರ್ಸಿಟಿ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಸೃಷ್ಟಿಕ ವತಿಯಿಂದ ಇಂಜಿನಿಯರ್ಸ್ ದಿನ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ್ ಯುನಿವರ್ಸಿಟಿ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥ ಡಾ. ಥಾಮಸ್ ಪಿಂಟೊ ಮಾತನಾಡಿ ‘ ಅಪಾರ ದೂರದರ್ಶಿತ್ವದ ಸರ್ ಎಂ. ವಿಶ್ವೇಶ್ವರಯ್ಯರವರ ಜೀವನ ಶೈಲಿ,
ಕಾರ್ಯಕ್ಷಮತೆ ಮತ್ತು ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ. ಕರುನಾಡಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಅವರು ದೇಶದ ಮಹಾನ್ ಚೇತನ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಜೇಶ್ವರ ಟೆಕ್ನೋ ಟ್ರೇಡ್ಸ್ ಸಂಸ್ಥೆಯ ಮುಖ್ಯಸ್ಥ ಅನಿಲ್ ವಾಮನ್ ಬಾಳಿಗಾ ಮಾತನಾಡಿ ‘ ಸರ್
ಎಂ. ವಿಶ್ವೇಶ್ವರಯ್ಯ ಅವರಂತಹ ಮತ್ತೋರ್ವ ಶ್ರೇಷ್ಠ ಇಂಜಿನಿಯರ್ ಸಿಗಲು ಸಾಧ್ಯವಿಲ್ಲ.ಅವರು ದೇಶದ ಎಲ್ಲ ಇಂಜಿನಿಯರಿಂಗ್ ವೃತ್ತಿಪರರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್ಕುೃಬೇಷನ್ ಹಾಗೂ ಸ್ಟಾರ್ಟ್ ಅಪ್ ನಿರ್ದೇಶಕ ಡಾ. ನವೀನ್ ಬಪ್ಪಳಿಗೆ ಮುಖ್ಯ
ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಪ್ರೊ.ಕೆ.ಶ್ರೀನಾಥ್ ರಾವ್ ಉಪಸ್ಥಿತರಿದ್ದರು.
ಪ್ರೊ. ಶಿಲ್ಪಾ ಎಸ್ ವಂದಿಸಿದರು. ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯಾ ಬೆಟ್ಟಿನ್ ಕಾರ್ಯಕ್ರಮವನ್ನು ನಿರೂಪಿಸಿದರು.