ಮಾ.3ರಂದು ಕಡಿಯಾಳಿಗೆ ಶೃಂಗೇರಿ ಶ್ರೀಗಳ ಭೇಟಿ

udp-sringeri sri
Published on

ಉಡುಪಿ: ಇತಿಹಾಸ ಪ್ರಸಿದ್ಧ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಮಾ. 3ರಂದು ಸಾಯಂಕಾಲ 4 ಗಂಟೆಗೆ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠಾಧೀಶ್ವರ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಕರಕಮಲಸಂಜಾತ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಚಿತ್ತೈಸಲಿದ್ದಾರೆ.

ಶ್ರೀಗಳನ್ನು ಕಡಿಯಾಳಿ ರಿಕ್ಷಾ ನಿಲ್ದಾಣದ ಬಳಿಯಿಂದ ಪೂರ್ಣಕುಂಭ ಸಹಿತ ವೈಭವದ ಮೆರವಣಿಗೆಯ ಮೂಲಕ ಕಡಿಯಾಳಿ ದೇಗುಲಕ್ಕೆ ಬರಮಾಡಿಕೊಳ್ಳಲಾಗುವುದು. ತದನಂತರ ದೇಗುಲದಲ್ಲಿ ಮಹಿಷಮರ್ದಿನಿ ದೇವಿಯ ದರ್ಶನ ಮಾಡಿ, ಶರ್ವಾಣಿ ಕಲ್ಯಾಣ ಮಂಟಪದಲ್ಲಿ ಸಮಸ್ತ ಭಕ್ತರಿಗೆ ಫಲಮಂತ್ರಾಕ್ಷತೆ ನೀಡಲಿದ್ದಾರೆ ಎಂದು ಕಡಿಯಾಳಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ ವಿ. ಆಚಾರ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net