

ಸುಳ್ಯ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸುಳ್ಯ ತಾಲೂಕು ಕಚೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಕಾರ್ಯಕ್ರಮ ನಡೆಯಿತು. ತಹಸೀಲ್ದಾರ್ ಜಿ.ಮಂಜುನಾಥ್ ಉದ್ಘಾಟಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಹಬ್ಬ ಆಚರಣೆ ಸರ್ವರನ್ನೂ ಬೆಸೆದು ಬಾಂಧವ್ಯ ವೃದ್ಧಿಸಲಿ ಎಂದರು.
ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ ಉಪನ್ಯಾಸಗೈದರು. ಮುಖ್ಯ ಅತಿಥಿಗಳಾಗಿ ಸುಳ್ಯ ಯಾದವ ಸಮಾಜದ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಉಪಸ್ಥಿತರಿದ್ದರು.
ನ.ಪಂ.ಮುಖ್ಯಾಧಿಕಾರಿ ಸುಧಾಕರ ಎಂ.ಎಚ್., ಸದಸ್ಯರಾದ ಶೀಲಾ ಕುರುಂಜಿ, ಶಶಿಕಲಾ ನೀರಬಿದಿರೆ, ಶಿಲ್ಪ ಸುದೇವ್, ಕಿಶೋರಿ ಶೇಟ್, ಸುಧಾಕರ ಕುರುಂಜಿಭಾಗ್, ರಾಜು ಪಂಡಿತ್, ಚಂದ್ರಹಾಸ ಕಿಲಾರ್ಕಜೆ, ರಾಜೇಶ್ ಆಲೆಟ್ಟಿ, ಬಾಲಕೃಷ್ಣ ಕೇರ್ಪಳ, ಗಂಗಾಧರ ಮಣಿಯಾಣಿ, ರಾಜೀವಿ ಪರ್ಲಿಕಜೆ ಮೊದಲಾದವರು ಉಪಸ್ಥಿತರಿದ್ದರು.