

ಕುಂಬಳೆ: ಯಕ್ಷಗಾನದ ಪಾತ್ರ ಗೌರವ ಹಾಗೂ ಸರಳ ಸಜ್ಜನಿಕೆಗೆ ಕುಂಬಳೆ ಶ್ರೀಧರ ರಾವ್ ಅವರ ವ್ಯಕ್ತಿತ್ವದ ವೈಶಿಷ್ಟೃವಾಗಿತ್ತು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀ ಹೇಳಿದರು.
ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯ ಪರಿಸರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕುಂಬಳೆ ಶ್ರೀಧರ ರಾವ್ ಸ್ಮತಿ-ಕೃತಿ ಕಾರ್ಯಕ್ರಮದಲ್ಲಿ ಕಲಾ ಶ್ರೀಧರ ಕೃತಿಯನ್ನು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಜತೆಗೆ ಬಿಡುಗಡೆಗೊಳಿಸಿ ಮಾತನಾಡಿದರು.
ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿದರು. ಹಿರಿಯ ವಿದ್ವಾಂಸ, ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ‘ಶ್ರೀಧರ ಸ್ಮತಿ’ಗೈದು ಮಾತನಾಡಿ, ಪಾರ್ತಿಸುಬ್ಬನ ನೆಲದಿಂದ ಬೆಳೆದ ಶ್ರೀಧರ ರಾಯರು ಹಂತಹಂತವಾಗಿ ಅಸಾಮಾನ್ಯ ಪಾತ್ರ ನಿರ್ವಹಣೆಯ ಮೂಲಕ ಗಮನ ಸೆಳೆದವರು ಎಂದರು.
ಕೃತಿ ಸಮಿತಿ ಅಧ್ಯಕ್ಷ ಮೋಹನದಾಸ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ ರಾಯರ ಪತ್ನಿ ಸುಲೋಚನ ಉಪಸ್ಥಿತರಿದ್ದರು. ಕಲಾ ಶ್ರೀಧರ ಕೃತಿ ಸಂಪಾದಕ ನಾ.ಕಾರಂತ ಪೆರಾಜೆ ಕೃತಿಯ ಬಗ್ಗೆ ಮಾತನಾಡಿದರು. ಶ್ರೀಧರ ರಾವ್ ಅವರ ಪುತ್ರರಾದ ಗಣೇಶ್ ಪ್ರಸಾದ್ ಕುಂಬಳೆ, ದೇವಿಪ್ರಸಾದ್ ಕುಂಬಳೆ ಉಪಸ್ಥಿತರಿದ್ದರು. ನಾ.ಕಾರಂತ ಅವರನ್ನು ಗೌರವಿಸಲಾಯಿತು.
ಬಳಿಕ ಕಂಸವಧೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಬೆಳಗ್ಗೆ ಶ್ರೀ ಕಣಿಪುರ ಕ್ಷೇತ್ರದ ಪ್ರಧಾನ ಅರ್ಚಕ ಮಾಧವ ಅಡಿಗ, ಕಲಾಪೋಷಕ ಮಂಜುನಾಥ ಆಳ್ವ ಮಡ್ವ, ಧರ್ಮಸ್ಥಳ ಮೇಳದ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕಲಾರತ್ನ ಶಂ.ನಾ.ಅಡಿಗ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕುಂಬಳೆ ಶ್ರೀಧರ ರಾವ್ ಅವರ ಪ್ರಧಾನ ಪಾತ್ರಗಳ ನೆನವರಿಕೆಯ ‘ಸಂವಾದದ ತಾಳಮದ್ದಳೆ’ ಹಾಗೂ ‘ಕೃಷ್ಣ ಸಂಧಾನ’ ತಾಳಮದ್ದಳೆ ಜರುಗಿತು.
ಸುದೀರ್ಘ ಕಾಲ ಶ್ರೀಧರ್ಮಸ್ಥಳ ಮೇಳದಲ್ಲಿ ವ್ಯವಸಾಯಿಗಳಾಗಿದ್ದ ದಿ.ಶ್ರೀಧರ ರಾವ್ ಅವರ ಸರಳ ಮತ್ತು ಮೃದು ಸ್ವಭಾವಗಳಿಂದ ಎಲ್ಲರ ಜತೆಗೆ ಒಂದಾಗಿದ್ದವರು. ತಮಗೆ ನೀಡಿದ ಪಾತ್ರಗಳನ್ನು ಸೂಕ್ಷ್ಮವಾಗಿ, ಅಚ್ಚುಕಟ್ಟಿನಿಂದ ನಿರ್ವಹಿಸಿದ್ದರು. ಪೂಜ್ಯ ಮಾತೃಶ್ರೀಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು. ಡಿ.ಹರ್ಷೇಂದ್ರ ಕುಮಾರ್, ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ https://www.vijayavani.net/achievement-of-alwas-sportsmen-at-national-level https://www.vijayavani.net/ashtabandha-brahmakalashotsava-in-kerpada-temple