

ಮಂಗಳೂರು : ಕೆಂಜಾರಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಎಚ್‌ಡಿಎಫ್‌ಸಿ ಬ್ಯಾಂಕ್, ರೋಟರಿಕ್ಲಬ್ ಮಂಗಳೂರು ಉತ್ತರ ಮತ್ತು ಕೆಎಂಸಿ ಮಂಗಳೂರು ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕೆಎಂಸಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ವೈದ್ಯಕೀಯ ಅಧಿಕಾರಿ ಡಾ.ರಂಜಿತಾ ರಾವ್ ಮಾತನಾಡಿ ‘ರಕ್ತದಾನವು ಸರ್ವಶ್ರೇಷ್ಠ ದಾನವಾಗಿದೆ. ಯುವ ಜನತೆ ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಬೇಕು ಎಂದರು.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ವ್ಯವಸ್ಥಾಪಕ ಶ್ರೀಹರಿ , ರೋಟರಿ ಕ್ಲಬ್ ಮಂಗಳೂರು ಉತ್ತರ ಅಧ್ಯಕ್ಷ ಮೋಹನ್ ಸಿ ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಇ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ
ಡಾ.ನೇತ್ರಾವತಿ ಪಿ.ಎಸ್., ಎನ್‌ಎಸ್‌ಎಸ್ ಘಟಾಕಾಧಿಕಾರಿ ಪ್ರೊ.ಅಗಸ್ಟಿನ್ ಡಿಸೋಜಾ ಉಪಸ್ಥಿತರಿದ್ದರು.
ಸಂಸ್ಥೆಯ ಇಂಜಿನಿಯರಿಂಗ್ ಹಾಗೂ ಫಾರ್ಮಸಿ ವಿಭಾಗದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಏರೋನಾಟಿಕಲ್ ವಿಭಾಗದ ವಿದ್ಯಾರ್ಥಿನಿ ಶಾಫಾ ಸ್ವಾಗತಿಸಿ, ವಿದ್ಯಾರ್ಥಿನಿ ಶಾದ್‌ವಾಲ ವಂದಿಸಿದರು.