

ಮಂಗಳೂರು : ಶ್ರೀದೇವಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದ ವತಿಯಿಂದ ಎನ್‌ಐಪಿಎಂ ಮತ್ತು ಐಎಸ್‌ಟಿಡಿ
ಸಹಯೋಗದಲ್ಲಿ ‘ಮುಂದಿನ ದೊಡ್ಡ ಬದಲಾವಣೆ, ಜನರು, ಲಾಭ ಮತ್ತು ಪ್ರಸ್ತುತಿ ‘ ವಿಷಯದ ಬಗ್ಗೆ ಮ್ಯಾನೇಜ್ಮೆಂಟ್ ಸಮಾವೇಶ ನಡೆಯಿತು.
ಮಂಗಳೂರಿನ ಸಿಐಐ ಅಧ್ಯಕ್ಷ ನಟರಾಜ್ ಹೆಗ್ಡೆ ಸಮಾವೇಶ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು. ಐಎಸ್‌ಟಿಡಿ
ಉಪಾಧ್ಯಕ್ಷ ಪ್ರೀತಂ ಕಾಮತ್ ಅವರು ಸ್ಥಿತಿ ಸ್ಥಾಪಕತ್ವದ ನಿರ್ಣಾಯಕ ವಿಷಯದ ಬಗ್ಗೆ ಮಾತನಾಡಿದರು.
ಸಿಎ ಹಸ್ತಾ ನಾರಾಯಣ್ ಅವರು ವಿಕಸನಗೊಳ್ಳುತ್ತಿರುವ ಹಣಕಾಸಿನ ಪ್ರಪಂಚ ವಿಷಯದ ಬಗ್ಗೆ ಹಾಗೂ ಅರ್ಜುನ್
ಜಾನ್ ಡಿಸೋಜಾ ಅವರು ಹೊಸ ಪೀಳಿಗೆಯ ಮಾರ್ಕೆಟಿಂಗ್ ತಂತ್ರ ವಿಷಯದ ಬಗ್ಗೆ ಮಾತನಾಡಿದರು.
ಮಾನವ ಸಂಪನ್ಮೂಲ ಅಧಿವೇಶನದಲ್ಲಿ ಆನಂದ್ ಜೇಮ್ಸ್ ಡಿಸಿಲ್ವಾ ಅವರು ಸಂಪನ್ಮೂಲ ಅಭ್ಯಾಸಗಳ ಭವಿಷ್ಯದ ಬಗ್ಗೆ
ವಿವರಿಸಿದರು.
ಐಎಸ್‌ಟಿಡಿ ಅಧ್ಯಕ್ಷ ಬಿಯಾನ್ ಫೆರ್ನಾಂಡಿಸ್ ಸಮಾರೋಪ ಭಾಷಣ ಮಾಡಿದರು. ಸಂಸ್ಥೆಯ ಪ್ರಾಂಶುಪಾಲ ಡಾ.ಕೆ. ಇ.
ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಎಂಬಿಎ ವಿಭಾಗದ ಮುಖ್ಯಸ್ಥೆ ಡಾ.ಗಾಯತ್ರಿ ಬಿ.ಜೆ, ಸಮಾವೇಶದ ಸಂಚಾಲಕಿ ಡಾ. ಶಿಲ್ಪರಾಣಿ ಕೆ. ಮತ್ತು ವಿದ್ಯಾರ್ಥಿ ಸಂಯೋಜಕ ರಮಾನಂದ ಶೆಟ್ಟಿ ಉಪಸ್ಥಿತರಿದ್ದರು.