

ಮಂಗಳೂರು : ನಗರದ ಶ್ರೀದೇವಿ ಫಾರ್ಮಸಿ ಕಾಲೇಜಿನಲ್ಲಿ ಎನ್.ಎಸ್.ಎಸ್ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಫಿಟ್ ಇಂಡಿಯಾ ಪ್ರತಿಜ್ಞೆಯನ್ನು ಎನ್‌ಎಸ್‌ಎಸ್ ಅಧಿಕಾರಿ ಪ್ರಮೋದ್ ಕುಮಾರ್ ಬೋಧಿಸಿದರು. ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ನವ್ಯಾ ಉಮೇಶ ಮೂಲ್ಯ ಇವರನ್ನು
ಸನ್ಮಾನಿಸಲಾಯಿತು. ವಿದ್ಯಾರ್ಥಿ ವಿದ್ಯಾರ್ಥಿನಿಯರು, ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗ ವಾಲಿಬಾಲ್, ಚೆಸ್, ಟೇಬಲ್ ಟೆನ್ನಿಸ್, ತ್ರೋಬಾಲ್, ಲಗೋರಿ, ಬ್ಯಾಡ್ ಮಿಂಟನ್ ಮುಂತಾದ ಪಂದ್ಯಾಟದಲ್ಲಿ ಭಾಗವಹಿಸಿದರು.