

ಹುಬ್ಬಳ್ಳಿ: ಇಲ್ಲಿನ ಸಾಗರ ಕಾಲನಿ ಮಂದಿರದಲ್ಲಿ ಆಷಾಢ ಶುಕ್ಲ ಏಕಾದಶಿ ಪರ್ವಕಾಲದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೇದಪೀಠದ ಅಧ್ಯಕ್ಷ ಡಾ. ಕಂಠಪಲ್ಲೀ ಸಮೀರಣಾಚಾರ್ಯ ಗುರುಗಳು ಹಿಂದು ಸಮಾಜದ ಭಕ್ತರಿಗೆ ಶ್ರೀಚಕ್ರ-ಶಂಖ ಲಾಂಛನ ಯುಕ್ತ ಶ್ರೀ ವಿಷ್ಣುದೀಕ್ಷೆ ಪ್ರದಾನ ಮಾಡಿ, ಭಾಗವತ ಕಥಾ ಪ್ರವಚನ ಉಪದೇಶಿಸಿದರು. ಕಂಠಪಲ್ಲೀ ವೇದಪೀಠ ಟ್ರಸ್ಟ್ ಮತ್ತು ಶ್ರೀಸಿಂಹಗೀತಾ ಪ್ರತಿಷ್ಠಾನಂ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಿಳಾ ಮಂಡಳದ ಸದಸ್ಯೆಯರು ಶ್ರೀ ವಿಷ್ಣು ಸಹಸ್ರನಾಮ ಪಠಿಸಿದರು. ಸಮಾಜದ ಮುಖ್ಯಸ್ಥರಾದ ರಾಘವೇಂದ್ರ ಧಾರವಾಡಕರ, ಸುಧೀಂದ್ರ ಕೊರವರ, ಸವಿತಾ ದೀಕ್ಷಿತ, ಶಶಿಕಲಾ ದೀಕ್ಷಿತ, ಇತರರಿದ್ದರು.