

ತಾಳಿಕೋಟೆ: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಆವರಣದಲ್ಲಿ ಭಾನುವಾರ ಲಿಂ. ಶ್ರೀ ವಿರಕ್ತ ಮಹಾಸ್ವಾಮಿಗಳ ಮೂರ್ತಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನಡೆಯಿತು.
ಮಿಣಜಗಿ ಕ್ರಾಸ್‌ನಲ್ಲಿರುವ ಕೌಟಿಲ್ಯ ಅಕಾಡೆಮಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜು ಸಜ್ಜನ, ಶಿಕ್ಷಕ ಅಶೋಕ ಸಜ್ಜನ ಅವರ ಕುಟುಂಬಸ್ಥರ ನೇತೃತ್ವದಲ್ಲಿ ಸಿದ್ಧಗೊಂಡಿರುವ ಶ್ರೀಗಳ ಭವ್ಯ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಪಟ್ಟಣದೊಳಗೆ ತರಲಾಯಿತು. ಬಳಿಕ ಶ್ರೀ ಬಸವೇಶ್ವರ ವೃತ್ತದಲ್ಲಿ ಶ್ರೀಮಠದ ಬಾಲ ಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ವಿರಕ್ತ ಶ್ರೀಗಳ ಮಹಾಮೂರ್ತಿಗೆ ಪುಷ್ಪಹಾಕಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಮೆರವಣಿಗೆ ಬಸ್ ನಿಲ್ದಾಣ, ಮಹಾರಾಣ ಪ್ರತಾಪ ಸಿಂಹ ವೃತ್ತ, ಶಿವಾಜಿ ಮಹಾರಾಜರ ವೃತ್ತ, ವಿಠ್ಠಲ ಮಂದಿರ ರಸ್ತೆ, ಕತ್ರಿ ಬಜಾರ ಮೂಲಕ ಶ್ರೀಮಠಕ್ಕೆ ತಲುಪಿತು. ಬಳಿಕ ಸಿದ್ಧಲಿಂಗ ಶ್ರೀಗಳು ಹಾಗೂ ಭಕ್ತರ ನೇತೃತ್ವದಲ್ಲಿ ಶ್ರೀಮಠದ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಪಟ್ಟಣದ ಮುಖಂಡರು, ಭಕ್ತರು, ಯುವಕರು ಹಾಗೂ ಸಜ್ಜನ ಪರಿವಾರದ ಕುಟುಂಬಸ್ಥರು ನೇತೃತ್ವ ವಹಿಸಿದ್ದರು.