ಶ್ರೀ ವೀರಮಹೇಶ್ವರ ಶಿವಯೋಗಿಗಳ ಜಾತ್ರೆ ಇಂದಿನಿಂದ

RATTIHALLI 1
Published on

ರಟ್ಟಿಹಳ್ಳಿ: ಶರಣರ ಸುಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಕುಡುಪಲಿ ಗ್ರಾಮದ ಕುಮದ್ವತಿ ನದಿ ದಂಡೆಯಲ್ಲಿರುವ ಆರಾಧ್ಯದೈವ ಹಾಗೂ ಪವಾಡ ಪುರುಷ ಶ್ರೀ ವೀರಮಹೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜ. 6ರಿಂದ ಜ. 12ರವರೆಗೆ ನಡೆಯಲಿದೆ.

ಜ. 6ರಂದು ಶ್ರೀ ಆಂಜನೇಯ ಸ್ವಾಮಿ ಕಂಕಣಾರೋಹಣ ಮತ್ತು ಹೂವಿನ ತೇರು, 7 ರಂದು ಶ್ರೀ ಆಂಜನೇಯ ಸ್ವಾಮಿಯ ದೊಡ್ಡ ರಥೋತ್ಸವ, 8ರಂದು ಗ್ರಾಮದ ಮಠಾಧೀಶರಿಂದ ಶ್ರೀ ವೀರಮಹೇಶ್ವರ ಕತೃ ಗದ್ದುಗೆಯ ರುದ್ರಾಭಿಷೇಕ, 9ರಂದು ಗುಗ್ಗಳ ಮಹೋತ್ಸವ ಮತ್ತು ಸಂಜೆ ಧರ್ಮಸಭೆ ಜರುಗುವುದು. 10ರಂದು ಬಂಡಿ ಉತ್ಸವ ಮತ್ತು ಎತ್ತುಗಳ ಮೆರವಣಿಗೆ, 11ರಂದು ಪಲ್ಲಕ್ಕಿ ಉತ್ಸವ ರಾತ್ರಿ ಪ್ರಸಾದ ವಿತರಣೆ ನಡೆಯಲಿದೆ. 12ರಂದು ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾದ ಮಹೆಬೂಬ ಸುಭಾನಿ ಉರುಸು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net