ಶ್ರೀ ಸಿದ್ಧಪರ್ವತ ಅಂಬಾದೇವಿಯ ಆಹ್ವಾನ

ದೇವರ ಾಹ್ವಾನ
ಗೊರೇಬಾಳ ದ್ಯಾವಮ್ಮ ದೇವಸ್ಥಾನದಲ್ಲಿ ಗ್ರಾಮ ದೇವತೆಗೆ ಶ್ರಾವಣಮಾಸದ ವಿಶೇಷ ಪೂಜೆ ನೆರವೇರಿಸಿದರು.
Published on

ಗೊರೇಬಾಳ: ಶ್ರಾವಣ ಶುಕ್ರವಾರ ಅಂಗವಾಗಿ ಸಿದ್ದಪರ್ವತ ಅಂಬಾದೇವಿಯನ್ನು ಗ್ರಾಮದ ಮುಖಂಡರು ಪೂಜಿಸಿ ಗ್ರಾಮಕ್ಕೆ ಆಹ್ವಾನಿಸುತ್ತಾರೆ.

ಮುಖಂಡರು ಬೆಳಗಿನ ಜಾವ ಕಾಲ್ನಡಿಗೆಯಲ್ಲಿ ಅಂಬಾದೇವಿ ದೇವಸ್ಥಾನಕ್ಕೆ ತೆರಳಿ ಪೂಜಿಸಿ ಅಲ್ಲಿಂದ ತನುಬಿಂದಿಗೆಯನ್ನು ಕಾಲ್ನಡಿಗೆಯಲ್ಲಿ ಗ್ರಾಮಕ್ಕೆ ತಂದು ದ್ಯಾವಮ್ಮನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವರು. ಗ್ರಾಮದ ಪ್ರತಿಯೊಂದು ಕುಟುಂಬ ಸಿಹಿ ಊಟ ತಯಾರಿಸಿ ಪೂಜೆಗೆ ಅಣಿಯಾಗುತ್ತಾರೆ.

ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ನೆರವೇರಿಸುವ ಸಂಪ್ರದಾಯ ಗ್ರಾಮದಲ್ಲಿ ಜರುಗುತ್ತದೆ. ನೂರಾರು ಭಕ್ತರು ಪೂಜಾ ಕ್ರಾರ್ಯಕ್ರಮದಲ್ಲಿ ಪಾಲೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net