ಶ್ರೀ ಶರಣಬಸವೇಶ್ವರ ರಥೋತ್ಸವ ವಿಜೃಂಭಣೆ

Kurgodu Jatre
ಎಚ್.ವೀರಾಪುರ ಗ್ರಾಮದಲ್ಲಿ ಶನಿವಾರ ಶ್ರೀ ಶರಣ ಬಸವೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ಕುರುಗೋಡು: ಸಮೀಪದ ಎಚ್.ವೀರಾಪುರ ಗ್ರಾಮದ ಆರಾಧ್ಯ ದೈವ ಶ್ರೀ ಶರಣ ಬಸವೇಶ್ವರ ರಥೋತ್ಸವ ಶನಿವಾರ ಅದ್ದೂರಿಯಾಗಿ ಜರುಗಿತು.

ರಥೋತ್ಸವ ನಿಮಿತ್ತ ಬೆಳಗ್ಗೆಯಿಂದ ಶರಣ ಬಸವೇಶ್ವರ ಮೂರ್ತಿಗೆ ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ನೈವೇದ್ಯ ಸಮರ್ಪಿಸಿದರು. ಸಂಜೆ ಡೊಳ್ಳು, ಕಳಸ, ಮಂಗಳ ವಾದ್ಯದೊಂದಿಗೆ ರಥೋತ್ಸವ ಆರಂಭಗೊಂಡಿತು.

ರಥ ಸಾಗುತ್ತಿದ್ದಂತೆ ಭಕ್ತರು ಹೂ-ಹಣ್ಣು ತೂರಿ ಭಕ್ತಿ ಸಮರ್ಪಿಸಿದರು. ಗ್ರಾಪಂನಿಂದ ಕುಡಿವ ನೀರು, ರಸ್ತೆಗಳ ನೈರ್ಮಲ್ಯ, ಬೀದಿ ದೀಪದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸ್ ಇಲಾಖೆ ಬಂದೋಬಸ್ತ್ ಒದಗಿಸಿತ್ತು. ಸೋಮಲಾಪುರ, ಎಮ್ಮಿಗನೂರು, ಚಿಟಿಗಿನಾಳ್, ಹಾವಿನಹಾಳು, ಮುದ್ದಟನೂರು, ಎಂ.ಸೂಗೂರು, ಮುಷ್ಟಗಟ್ಟೆ ಗಾಮದ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net