ಕಳೆಗಟ್ಟಿದ ಶ್ರೀ ರುದ್ರೇಶ್ವರ ಸ್ವಾಮಿ ಜಾತ್ರೆ

Rathoshwa
ಶ್ರೀ ರುದ್ರೇಶ್ವರ ಸ್ವಾಮಿ ಜಾತ್ರೆ
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ಜನತೆಯಲ್ಲಿ ಹಬ್ಬದ ವಾತಾವರಣವನ್ನೆ ನಿರ್ಮಿಸುವ ಮೇಗಲಪೇಟೆ ಕವಾಡಿಮಠದ ಶ್ರೀ ರುದ್ರೇಶ್ವರ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಶ್ರೀ ರುದ್ರೇಶ್ವರ ಸ್ವಾಮಿಯ ರಥೋತ್ಸವಕ್ಕೆ ಶ್ರೀ ಸಿದ್ದರಾಮೇಶ್ವರ ಪ್ಲೋರ್ ಮಿಲ್‌ನ ಕೆ.ಎಸ್.ಶಿವಶಂಕರ್ ಚಾಲನೆ ನೀಡಿದರು. ಸಾವಿರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು. ರಥೋತ್ಸವದ ಪ್ರಯುಕ್ತ ಬೆಳಗಿನಿಂದಲೇ ಶ್ರೀ ರುದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಹೋಮಹವನಾದಿಗಳನ್ನು ನಡೆಸಲಾಯಿತು.
ಆಕರ್ಷಕ ವಿವಿಧ ಬಗೆಯ ಬಣ್ಣಬಣ್ಣದ ಹೂಗಳಿಂದ ಸಿಂಗರಿಸಿದ ಉತ್ಸವಮೂರ್ತಿಯನ್ನು ರಥದಲ್ಲಿರಿಸಿದ ಭಕ್ತಾಧಿಗಳು ಜಯಘೋಷಗಳೊಂದಿಗೆ ರಥವನ್ನು ಎಳೆದರು. ಸಡಗರದಿಂದ ನೆರೆದಿದ್ದ ಭಕ್ತರು ದವನ ಚುಚ್ಚಿದ ಸೂರು ಬಾಳೆಹಣ್ಣುಗಳನ್ನು ಎಸೆದು ಸಂಭ್ರಮಿಸಿದರು.
ರಥೋತ್ಸವದಲ್ಲಿ ವೀರಗಾಸೆ, ನಂದಿಧ್ವಜ ಕುಣಿತ, ಜಾನಪದ ಕಲಾತಂಡಗಳ ಕಲಾವಿದರ ನೃತ್ಯಗಳು ಆಕರ್ಷಿಸಿದವು. ರಥೋತ್ಸವದ ಪ್ರಯುಕ್ತ ಅರವಂಟಿಕೆಗಳಲ್ಲಿ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ವಿತರಿಸಲಾಯಿತು. ದೇವಾಲಯದ ಸಮಿತಿಯಿಂದ ಅನ್ನದಾಸೋಹ ನಡೆಯಿತು.
ಶಾಸಕ ಎನ್.ಸ್ರೀನಿವಾಸ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರದೀಪ್, ಸದಸ್ಯೆ ಎನ್.ಎಸ್.ಪೂರ್ಣಿಮಾ ಸುಗ್ಗರಾಜು, ಶ್ರೀರುದ್ರೇಶ್ವರಸ್ವಾಮಿ ದೇವಾಲಯ ದತ್ತಿ ಸಮಿತಿ ಅಧ್ಯಕ್ಷ ಎನ್.ಆರ್.ಜಗದೀಶ್, ಗೌರವಾಧ್ಯಕ್ಷ ಎಸ್.ಎಸ್.ನಟರಾಜು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ದಯಾಶಂಕರ್, ಗೌರವ ಕಾರ್ಯದರ್ಶಿ ರುದ್ರಮೂರ್ತಿ, ಕಾರ್ಯದರ್ಶಿ ಬಾವಿಕೆರೆ ಗಂಗರಾಜು, ಸಹಕಾರ್ಯದರ್ಶಿ ಪುಟ್ಟಣ್ಣ, ಉಪಾಧ್ಯಕ್ಷ ರಾಜು, ಸದಸ್ಯ ಕೆ.ಎಸ್.ಶಿವಶಂಕರ್, ಶ್ರೀಕಂಠಮೂರ್ತಿ, ರೇಣುಕಾಪ್ರಸಾದ್, ಗಂಗಾಧರಪ್ಪ, ದೀಪಕ್, ಗಣೇಶ್, ಬಸವರಾಜು, ಮಂಜುನಾಥ್, ಮಲ್ಲಿಕಾರ್ಜುನಯ್ಯ, ದೇವಾಲಯ ಪ್ರಧಾನ ಆರ್ಚಕ ರಕ್ಷಿತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net