ಶ್ರೀ ರವಳನಾಥ ಕೋ-ಆಪ್​ ಹೌಸಿಂಗ್​ ಫೈನಾನ್ಸ್​ ಸೊಸೈಟಿ ಆರಂಭ

5 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಾರಾಷ್ಟ್ರ ಮೂಲದ ಶ್ರೀ ರವಳನಾಥ ಕೋ-ಆಪ್​ ಹೌಸಿಂಗ್​ ಫೈನಾನ್ಸ್​ ಸೊಸೈಟಿಯ 15ನೇ ಹಾಗೂ ಕರ್ನಾಟಕದ 4ನೇ ಶಾಖೆಯನ್ನು ಧಾರವಾಡದಲ್ಲಿ ಉದ್ಘಾಟಿಸಲಾಗಿದೆ. ಅತ್ಯಂತ ಸರಳ, ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಪ್ರತಿಯೊಬ್ಬರ ಮನೆ ನಿರ್ಮಾಣದ ಕನಸನ್ನು ನನಸಾಗಿಸುವುದೇ ನಮ್ಮ ಉದ್ದೇಶ ಎಂದು ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಎಂ.ಎಲ್​. ಚೌಗುಲೆ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1996ರಲ್ಲಿ 18 ಸದಸ್ಯರು ಹಾಗೂ 10 ಸಾವಿರ ರೂ. ಷೇರು ಬಂಡವಾಳದೊಂದಿಗೆ ಆರಂಭಿಸಲಾಯಿತು. ಇದೀಗ 13,877 ಸದಸ್ಯರು, 512 ಕೋಟಿ ರೂ. ಠೇವಣಿ ಹೊಂದಿದ್ದಲ್ಲದೆ, 351 ಕೋಟಿ ರೂ. ಸಾಲ ವಿತರಿಸಿರುವುದು ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿ. 2015ರಲ್ಲಿ ಸಂಸ್ಥೆಯು ಬಹು ರಾಜ್ಯ ಸ್ಥಾನಮಾನ ಪಡೆದಿದ್ದು, ಮಹಾರಾಷ್ಟ್ರ , ಕರ್ನಾಟಕ ಹಾಗೂ ದೆಹಲಿಯಲ್ಲಿ ಅಧಿಕಾರ ವ್ಯಾಪ್ತಿ ಹೊಂದಿದೆ ಎಂದರು.

ಎಲ್ಲ ಶಾಖೆಗಳು ಅತ್ಯಾಧನಿಕ ಬ್ಯಾಂಕಿಂಗ್​ ಸೇವೆಗಳಾದ ಆರ್​ಟಿಜಿಎಸ್​, ಮೊಬೈಲ್​ ಬ್ಯಾಂಕಿಂಗ್​, ಕ್ಯೂಆರ್​ ಕೋಡ್​, ಲಾಕರ್​ ಸೌಲಭ್ಯ ನೀಡಲಿದೆ. ಗ್ರಾಹಕರ ಅನುಕೂಲಕ್ಕಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ವ್ಯವಹಾರ ನಡೆಸಲಾಗುತ್ತದೆ. ಆಸ್ತಿ ಅಡಮಾನ ಸಾಲ, ಶೈಕ್ಷಣಿಕ ಸಾಲ, ಚಿನ್ನದ ಸಾಲ, ಗೃಹೋಪಯೋಗಿ ಸಾಲಗಳನ್ನು ನೀಡಲಾಗುತ್ತಿದೆ ಎಂದರು.

ಧಾರವಾಡ ಶಾಖೆ ಅಧ್ಯಕ್ಷ ಡಾ. ಶಿವಾನಂದ ಚೌಗಲಾ ಮಾತನಾಡಿ, ಹಿರಿಯ ನಾಗರಿಕರಿಗೆ, ವಯೋವೃದ್ಧರಿಗೆ, ಅನಾರೋಗ್ಯ ಪೀಡಿತರಿಗೆ ಮನೆ ಬಾಗಿಲಿಗೆ ಸೇವೆ ನೀಡುತ್ತಿರುವುದು ಸಂಸ್ಥೆಯ ವಿಶೇಷ ಎಂದರು

ವಿಜಯ ಅರಬೋಲೆ, ಸಂತೋಷ ಪಾಟೀಲ, ಬಾಬಾಸಾಹೇಬ ಮಾರ್ತಾಂಡ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net