ಶ್ರೀ ರಂಗನಾಥ ಸ್ವಾಮಿಗೆ ರೂ. 1.10 ಲಕ್ಷ ಗೌರವಧನ !

KDR letter
ಕಡೂರು ತಾಲೂಕಿನ ಹೊಗರೇಹಳ್ಳಿ ರಂಗನಾಥಸ್ವಾಮಿ ದೇವಾಲಯದ ಸೇವಾಕಾರ್ಯಕ್ಕೆ ಶಾಸಕ ಕೆ.ಎಸ್.ಆನಂದ್ 11ತಿಂಗಳ ಗೌರವಧನದ 1.10 ಲಕ್ಷ ರೂ. ನೀಡುವ ಕುರಿತು ಬರೆದಿರುವ ಪತ್ರ.
Published on

ಕಡೂರು: ಕೆ.ಎಸ್.ಆನಂದ್ ಶಾಸಕನಾಗಿ 11 ತಿಂಗಳು ಕಳೆದ ಹಿನ್ನೆಲೆಯಲ್ಲಿ ಮನೆದೇವರಿಗೆ ಪ್ರತಿ ತಿಂಗಳ ಶಾಸಕರ ಗೌರವಧನದಲ್ಲಿ ತಲಾ 10 ಸಾವಿರದಂತೆ 1.10 ಲಕ್ಷ ರೂಪಾಯಿಯನ್ನು ಹೊಗರೇಹಳ್ಳಿ ಶ್ರೀ ರಂಗನಾಥಸ್ವಾಮಿ ದೇವಾಲಯದ ಸೇವಾಕಾರ್ಯಕ್ಕೆ ನೀಡುವ ಮೂಲಕ ಹರಕೆ ತೀರಿಸಿದ್ದಾರೆ.

2023ರ ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾದರೆ ಮನೆದೇವರಾದ ಹೊಗರೇಹಳ್ಳಿ ಶ್ರೀ ರಂಗನಾಥಸ್ವಾಮಿಗೆ ಶಾಸಕನ ಗೌರವಧನದಲ್ಲಿ ಪ್ರತಿ ತಿಂಗಳೂ 10 ಸಾವಿರ ರೂ. ಸ್ವಾಮಿಯ ಸೇವಾ ಕಾರ್ಯಕ್ಕೆ ನೀಡುವುದಾಗಿ ಹರಕೆ ಹೊತ್ತಿದ್ದರು. ಗೌರವಧನ ಮಂಜೂರಾದ ಬಳಿಕ ದೇವಾಲಯದ ಸೇವಾ ಕಾರ್ಯಕ್ಕೆ ಹಣ ಮೀಸಲಿಟ್ಟು ದೇವಾಲಯದ ಆಡಳಿತದ ಮಂಡಳಿಗೆ ಪತ್ರ ಬರೆಯುವ ಮೂಲಕ 1.10 ಲಕ್ಷ ರೂ. ಮೊತ್ತದ ಚೆಕ್ ಅನ್ನು ದೇವಾಲಯಕ್ಕೆ ನೀಡಿ ಹರಕೆ ಸಲ್ಲಿಸಿದ್ದಾರೆ. ಹಣ ನೀಡುವ ಕುರಿತು ಬರೆದಿದ್ದ ಪತ್ರದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿಂದೆ ನನ್ನ ತಾಯಿ ಲಕ್ಕಮ್ಮ ಸಿದ್ದಪ್ಪ ಜಿಪಂ ಸದಸ್ಯೆಯಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಜಿಪಂ ಸದಸ್ಯರಿಗೆ ಬರುತ್ತಿದ್ದ ಐದು ವರ್ಷದ ಗೌರವಧನವನ್ನು ಸ್ವಾಮಿಯ ಸೇವಾಕಾರ್ಯಕ್ಕೆ ಸಮರ್ಪಿಸಿದ್ದರು. ನಾನು ಸ್ವಾಮಿಯ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿದ್ದು, ನನ್ನ ಶಾಸಕ ಸ್ಥಾನ ಇರುವವರೆಗೂ ಪ್ರತಿ ತಿಂಗಳೂ 10 ಸಾವಿರ ರೂ. ಗೌರವಧನವನ್ನು ಸ್ವಾಮಿಯ ಸೇವಾಕಾರ್ಯಕ್ಕೆ ನೀಡುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net