ಪಟ್ಟಾಭಿರಾಮನಾದ ಉಡುಪಿ ಕೃಷ್ಣ

krishna
Published on

ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದರೆ, ಇತ್ತ ಉಡುಪಿಯ ಶ್ರೀಕೃಷ್ಣ ಪಟ್ಟಾಭಿರಾಮನಾಗಿ ಅಲಂಕೃತನಾಗಿದ್ದಾನೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಕಡೆಗೋಲು ಕೃಷ್ಣ ದೇವರಿಗೆ ರಾಮ ಅಲಂಕಾರ ಮಾಡುವ ಮೂಲಕ ಭಕ್ತರು ಕೃಷ್ಣನಲ್ಲಿ ರಾಮನನ್ನು ಕಂಡರು. ಅಲಂಕಾರ ಪ್ರಿಯ ಶ್ರೀಕೃಷ್ಣ ದೇವರಿಗೆ ಪ್ರತಿ ದಿನ ಒಂದೊಂದು ಅಲಂಕಾರ ಮಾಡಲಾಗುತ್ತದೆ.

ಅಷ್ಟ ಮಠಗಳಲ್ಲಿ ಒಂದಾದ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಬುಧವಾರ ಕೃಷ್ಣ ದೇವರಿಗೆ ಪಟ್ಟಾಭಿರಾಮ ಅಲಂಕಾರ ನೆರವೇರಿಸಿದರು.

ರಾಮ ಬಿಲ್ಲು ಬಾಣ ಹಿಡಿದುಕೊಂಡು ಸಿಂಹಾಸನದಲ್ಲಿ ಕುಳಿತು ಪಟ್ಟಾಭಿಷೇಕವಾದ ದಿನವನ್ನು ಶ್ರೀಗಳು ನೆನಪು ಮಾಡಿಕೊಟ್ಟರು. ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಮಹಾಪೂಜೆ ಸಲ್ಲಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net