ಶ್ರೀ ರಾಮ ನಾಮ ಜಪ ಅಭಿಯಾನಕ್ಕೆ ಚಾಲನೆ

Rama japa
Published on

ಭಟ್ಕಳ: ಪಟ್ಟಣದ ರಘುನಾಥ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಉತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ತ್ರಿದಿನಾತ್ಮಕ ಶ್ರೀ ರಾಮ ನಾಮ ಜಪ ಅಭಿಯಾನ ಶುಕ್ರವಾರ ವೆ.ಮೂ. ರಾಮಚಂದ್ರ ಭಟ್ ಅವರ ನೇತೃತ್ವದಲ್ಲಿ ಆರಂಭಗೊಂಡಿತು.

ಇಲ್ಲಿನ ರಘುನಾಥ ದೇವಸ್ಥಾನದಲ್ಲಿ ಅನಾದಿ ಕಾಲದಿಂದದಲೂ ರಾಮನವಮಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಆಶಯದಂತೆ ಮಠ ಸ್ಥಾಪನೆಯಾಗಿ 550 ಸಂವತ್ಸರ ಪೂರ್ಣಗೊಂಡ ಹಿನ್ನೆಲೆಯಲ್ಲಿ 550ದಿವಸ 550ಕೋಟಿ ರಾಮನಾಮತಾರಕ ಮಹಾಜಪ ಅಭಿಯಾನಕ್ಕೆ ಶ್ರೀಗಳು ಮಾರ್ಗದರ್ಶನ ನೀಡಿದ್ದರು.

ಹೀಗಾಗಿ 3 ದಿನಗಳ ಕಾಲ ಜಪ ಅಭಿಯಾನ ನೆರವೇರಲಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ 1.30ಗಂಟೆಯವರೆಗೆ ನೂರಾರು ಜಾಪಕರು ರಾಮನಾಮ ತಾರಕ ಮಹಾಮಂತ್ರವನ್ನು ಪಠಿಸಿದರು. ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಉಪಾಧ್ಯಕ್ಷ ನರೇಂದ್ರ ನಾಯಕ, ವೆಂಕಟದಾಸ ಕಾಮತ (ಬಾಸ್) ಕಾಮಾಕ್ಷಿ ದೇವಸ್ಥಾನದ ಟ್ರಸ್ಟಿ ಗಿರಿಧರ ನಾಯಕ, ವೀರ ವಿಠಲ್ ದೇವಸ್ಥಾನದ ಅನಿಲ ಭಟ್, ಬಿ.ಕೆ. ಪೈ, ಅನಂತ ಪೈ, ಜಿಎಸ್‌ಬಿ ಮಹಿಳಾ ಮಂಡಲದ ಅಧ್ಯಕ್ಷೆ ಸುನೀತಾ ಪೈ, ಅನುಪಮಾ ಭಟ್ ಇತರರು ಇದ್ದರು. ಅರ್ಚಕ ರಾಘವೇಂದ್ರ ಭಟ್ ಶ್ರೀ ದೇವರನ್ನು ಅಲಂಕರಿಸಿ ಪೂಜಿಸಿದರು. ಸೀಯಾ ಭಟ್, ವಿನಯಾ ಭಟ್, ರಜತ ಭಟ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net